ಎಸ್‌ಡಿಎಂ ಆಸ್ಪತ್ರೆಯಿಂದ ಉತ್ತಮ ಸೇವೆ : ಶ್ರೀಧರ್ ಕೆ.ವಿ. ಹೇಳಿಕೆ

 ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿವಿ- ಮೂಗು- ಗಂಟಲು ಉಚಿತ ತಪಾಸಣಾ ಶಿಬಿರವನ್ನು ಶ್ರೀಧರ್ ಕೆ.ವಿ. ಉದ್ಘಾಟಿಸಿದರು. ಪ್ರಮುಖರಾದ ಎಂ.ಜನಾರ್ದನ್, ಡಾ.ರೋಹನ್ ಎಂ.ದೀಕ್ಷಿತ್, ಡಾ.ದೇವೇಂದ್ರ ಕುಮಾರ್ ಉಪಸ್ಥಿತರಿದ್ದರು.
ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿವಿ- ಮೂಗು- ಗಂಟಲು ಉಚಿತ ತಪಾಸಣಾ ಶಿಬಿರವನ್ನು ಶ್ರೀಧರ್ ಕೆ.ವಿ. ಉದ್ಘಾಟಿಸಿದರು. ಪ್ರಮುಖರಾದ ಎಂ.ಜನಾರ್ದನ್, ಡಾ.ರೋಹನ್ ಎಂ.ದೀಕ್ಷಿತ್, ಡಾ.ದೇವೇಂದ್ರ ಕುಮಾರ್ ಉಪಸ್ಥಿತರಿದ್ದರು.
Published on
ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಕಿವಿ- ಮೂಗು- ಗಂಟಲು ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆಯ ಆಂಕೊ ಸರ್ಜನ್ ಡಾ.ರೋಹನ್, ಎಂ.ದೀಕ್ಷಿತ್ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಉಪಸ್ಥಿತರಿದ್ದರು. ಸ್ಟೋರ್ ಇನ್‌ಚಾರ್ಜ್ ಜಗನ್ನಾಥ ಎಂ. ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.

ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ ಕಿವಿ- ಮೂಗು- ಗಂಟಲು ಸಂಬಂಧಿಸಿದ ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಜನರ ಪಾಲಿಗೆ ಎಸ್‌ಡಿಎಂ ಆಸ್ಪತ್ರೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಕ್ರಿಟಿಕಲ್‌ಕ್ಯಾರ್ ತಜ್ಞರು ಮತ್ತು ನ್ಯೂರೋ ಸರ್ಜನ್ ಆಸ್ಪತ್ರೆಯಲ್ಲಿ ಪ್ರತಿದಿನ ಲಭ್ಯವಿರಲಿದ್ದು, ಡಾ.ಹೆಗ್ಗಡೆಯವರ ಆಶೀರ್ವಾದದಲ್ಲಿ ಶೀಘ್ರದಲ್ಲಿ ಎಂಆರ್‌ಐ ಸೇವೆ ಕೂಡ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net