ಬೆಳಗ್ಗೆ ತೋರಣ ಮಹೂರ್ತ, ವಿಮಾನ ಶುದ್ಧಿ, ಕ್ಷೇತ್ರಪಾಲ ಪೂಜೆ, ನಾಗದೇವರ ಪೂಜೆ, ಕೂಷ್ಮಾಂಡಿನೀ ದೇವಿ ಹಾಗೂ ಭೈರವಿ ಪದ್ಮಾವತಿ ದೇವಿಯ ಶೋಡಷೋಪಚಾರ ಪೂಜೆಗಳು ನೆರವೇರಿದವು. ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಲಕ್ಷ ಹೂವಿನ ವಿಶೇಷ ಪೂಜೆ ನಡೆಯಿತು. ಬಳಿಕ ದೇವರ ಉತ್ಸವ ಮತ್ತು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನೆರವೇರಿತು.