

ಹಳೆಯಂಗಡಿ (ದ.ಕ.): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸಿನ ಎದುರಿಗೆ ಗಿಡುಗ ಬಡಿದು, ಗಾಜು (ವಿಂಡ್ ಶೀಲ್ಡ್) ಒಡೆದು ಚೂರುಗಳು ಜನರ ಮೇಲೆ ಹಾರಿ ಡ್ರೈವರ್ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕಾರ್ಕಳದಿಂದ ಹೊರಟ ಲಕ್ಷ್ಮೀ ಗಣೇಶ್ ಬಸ್ಸು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳೆಯಂಗಡಿ ದಾಟುತ್ತಿದ್ದಂತೆ ಬಸ್ಸಿನ ಗಾಜಿಗೆ ವೇಗವಾಗಿ ಬಂದ ಗಿಡುಗ ಅಪ್ಪಳಿಸಿತು. ಗಾಜು ಒಡೆದು ತಕ್ಷಣ ತಮ್ಮ ಮೇಲೆ ಗಾಜಿನ ಚೂರು ಬೀಳುತ್ತಿದ್ದರೂ ವಿಚಲಿತರಾಗದ ಚಾಲಕ ಪುತ್ತೂರಿನ ಕೂರೇಲು ನಿವಾಸಿ ಚಾಲಕ ಹರೀಶ್ ಪೂಜಾರಿ ಬಸ್ಸನ್ನು ನಿಯಂತ್ರಿಸಿದ್ದಾರೆ. ಒಂದು ಕ್ಷಣಕ್ಕೆ ಕಣ್ಣುಮುಚ್ಚಿ ಸ್ಟೇರಿಂಗ್ ವೀಲ್ ಬಿಡುತ್ತಿದ್ದರೂ ಬಸ್ಸು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಹೊಡೆದು ದೊಡ್ಡ ಅಪಘಾತ ಸಂಭವಿಸುತ್ತಿತ್ತು.
ಹರೀಶ್ ಪೂಜಾರಿ ಅವರ ಸಮಯಪ್ರಜ್ಞೆಯನ್ನು ಪ್ರಯಾಣಿಕರು ಪ್ರಶಂಸಿದಿದ್ದಾರೆ. ಚಾಲಕ ಮತ್ತು ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದೆ. ಮಹಿಳೆಯೊಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ.