ತುಳು ಭಾಷೆಗೆ ಸೌಹಾರ್ದವೇ ಅಡಿಪಾಯ

ತುಳುವ ಐಸಿರಿ
 ಧವಲಾ ಕಾಲೇಜಿನಲ್ಲಿ ನಡೆದ ತುಳುವ ಐಸಿರಿ-2026 ಕಾರ್ಯಕ್ರಮದಲ್ಲಿ ನಾಟಿ ವೈದ್ಯೆ ಶಾಂತಾ ಇಂದು ನಾಯ್ಕ, ದೈವ ನರ್ತಕ ಕರಿಯ ನಲ್ಕೆ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರ್, ಡಿಜೆವಿವಿ ಸಂಘದ ಸಂಚಾಲಕ ಕೆ.ಹೇಮರಾಜ್ ಇದ್ದರು.

Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ತುಳುನಾಡಿನಲ್ಲಿ 500ಕ್ಕೂ ಹೆಚ್ಚು ದೈವಗಳಿದ್ದು ಅಷ್ಟೇ ಸಂಖ್ಯೆಯಲ್ಲಿ ಪಾರ್ದನಗಳಿವೆ. ತುಳು ಕವಿತೆ, ಕತೆ, ಒಗಟುಗಳೂ ಸೇರಿದಂತೆ ಸಮೃದ್ಧ ಜಾನಪದ ಸಂಪತ್ತು ತುಳು ಪರಂಪರೆಯನ್ನು ಶ್ರೀಮಂತಗೊಳಿಸಿದೆ. ತುಳು ಭಾಷೆಗೆ ಸೌಹಾರ್ದವೇ ಅಡಿಪಾಯ ಎಂದು ಉಡುಪಿ ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಧವಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ಗುರುವಾರ ಧವಲಾ ಕಾಲೇಜಿನಲ್ಲಿ ತುಳು ವಿಚಾರಗೋಷ್ಠಿ, ಸಾಹಿತ್ಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ತುಳುವ ಐಸಿರಿ-2026 ಉದ್ಘಾಟಿಸಿ ಆಡಳಿತ ಭಾಷೆಯಾಗಿ ತುಳು ಹೊಸ ಸಾಧ್ಯತೆಗಳು ವಿಷಯದ ಕುರಿತು ಮಾತನಾಡಿದರು.

ನಾಟಿ ವೈದ್ಯೆ ಶಾಂತಾ ಇಂದು ನಾಯ್ಕ, ದೈವ ನರ್ತಕ ಕರಿಯ ನಲ್ಕೆ ಅವರನ್ನು ಸನ್ಮಾನಿಸಲಾಯಿತು. ಡಿಜೆವಿವಿ ಸಂಘದ ಸಂಚಾಲಕ ಕೆ.ಹೇಮರಾಜ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಪೃಥ್ವಿರಾಜ್ ಶೆಟ್ಟಿ, ಜಾನಪದ ವಿದ್ವಾಂಸ ಬಾಬು ಪಾಂಗಾಳ, ಹಳೇ ವಿದ್ಯಾರ್ಥಿ ರಮೇಶ್ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಅವಿನಾಶ್ ಸುವರ್ಣ, ಸುಜನ್ ಶೆಟ್ಟಿ, ತ್ರಿಶಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net