ಯುವ ಪೀಳಿಗೆಯಲ್ಲಿ ಮೂಡಲಿ ಧರ್ಮಪ್ರಜ್ಞೆ : ಡಾ.ಎಂ.ಮೋಹನ ಆಳ್ವ

ಧರ್ಮಸಭೆಯನ್ನು ಶ್ರೀ ರಾಜಶೇಖರಾನಂದ ಶ್ರೀಪಾದರು ಉದ್ಘಾಟಿಸಿದರು.
ಧರ್ಮಸಭೆಯನ್ನು ಶ್ರೀ ರಾಜಶೇಖರಾನಂದ ಶ್ರೀಪಾದರು ಉದ್ಘಾಟಿಸಿದರು.
Published on
ಧಾರ್ಮಿಕ ಪ್ರಜ್ಞೆ ಬಿಟ್ಟು ನಮ್ಮ ಬದುಕಿಲ್ಲ. ಯುವ ಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆ ದೂರವಾಗುತ್ತಿದ್ದು, ನಮ್ಮವರಲ್ಲಿ ಧರ್ಮಪ್ರಜ್ಞೆ ಮೂಡಿಸುವ ಅಗತ್ಯವಿದೆ. ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ ಕಳಕಳಿ ಹೊಂದಿರುವ ಶ್ರೀಪಾದರು ಹಿಂದು ಸನಾತನ ಧರ್ಮದ ಉಳಿವಿಗಾಗಿ ಮಾತನಾಡುತ್ತಿದ್ದಾರೆ. ಇದೊಂದು ಕ್ಷೇತ್ರವಾಗಿ ಪುನರುತ್ಥಾನವಾಗಬೇಕು ಎಂಬ ಶ್ರೀಪಾದರ ಇಚ್ಛೆಗೆ ತನ್ನ ಬೆಂಬಲ ಇದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಶ್ರೀ ರಾಜಶೇಖರಾನಂದ ಶ್ರೀಪಾದರ ಉಪಸ್ಥಿತಿಯಲ್ಲಿ ಭಾನುವಾರ ಗುರುಪುರ ಶ್ರೀ ವಜ್ರದೇಹಿ ಮಠದ ವಜ್ರದೇಹಿ ಜಾತ್ರೆಯಲ್ಲಿ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ವಜ್ರದೇಹಿ ಶ್ರೀಗಳು ಮಾತನಾಡಿ, ಜಾತಿ-ಮತ ಬೇಧವಿಲ್ಲದೆ ಹಿಂದು ಸಮಾಜ ಸದೃಢವಾಗಲಿ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯೊಂದಿಗೆ ನಮ್ಮ ಸಂಸ್ಕೃತಿ-ಸಂಸ್ಕಾರ ಬೆಳೆಯಬೇಕು. ಧಾರ್ಮಿಕತೆ ಜತೆಯಲ್ಲಿ ರಾಷ್ಟ್ರ ಕಟ್ಟುವ ಕೆಲಸವಾಗಬೇಕು. ಧರ್ಮ ಮತ್ತು ರಾಷ್ಟ್ರಕ್ಕೆ ಚ್ಯುತಿ ಬಂದಲ್ಲಿ ಧ್ವನಿ ಎತ್ತುವ ಗುಣ ಬೆಳೆಸಿಕೊಳ್ಳಿ ಎಂದರು.
ಬೆಂಗಳೂರಿನ ಕೆಳದಿ ಫೌಂಡೇಶನ್ ಕೆಳದಿ ವಂಶಸ್ಥ ಚಂದ್ರಕಾಂತ ಸಂಗ ನಾಯಕರು ಮಾತನಾಡಿ, ಗುರುಪುರ ಮತ್ತು ಕೆಳದಿ ಅರಸು ಮನೆತನಕ್ಕೆ ಇದ್ದ ನಂಟು ವಿವರಿಸಿ ಇಲ್ಲಿ ನಿರ್ಮಾಣವಾಗಲಿರುವ ದೇವಾಲಯಕ್ಕೆ ಒಂದು ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದರು.
ಶಾಸಕ ಡಾ.ಭರತ್ ಶೆಟ್ಟಿ, ಕ್ಯಾಟರಿಂಗ್ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಂಗಳೂರಿನ ಅಭಯ ಫೌಂಡೇಶನ್ ಆಡಳಿತ ನಿರ್ದೇಶಕ ಎಂ.ಬಿ.ಉಮೇಶ್, ಸಕಲೇಶಪುರದ ವಕೀಲ ಎಸ್.ವಿ.ಷಣ್ಮುಖ, ಮಂಗಳೂರಿನ ಉದ್ಯಮಿ ಜಿತೇಂದ್ರ ಕೊಟ್ಟಾರಿ ಮಾತನಾಡಿದರು.
ಪ್ರಜ್ವಲ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ಕಲ್ಲಡ್ಕ ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಈಶ್ವರ್ ಭಟ್, ಬೆಂಗಳೂರಿನ ಸ್ವಯಂಸೇವಕ ಭರತ್ ರಾವ್, ಪಜೀರು ಗೋವನಿತಾಶ್ರಮ ಟ್ರಸ್ಟಿ ರವಿ ರೈ ಪಜೀರು, ಚಿತ್ರೋದ್ಯಮಿ ರವಿ ರೈ ಕಳಸ, ಸುರೇಂದ್ರ ರಾವ್ ಉರ್ವಸ್ಟೋರ್, ಉದ್ಯಮಿ ರವಿರಾಜ ಶೆಟ್ಟಿ, ಉಳುವಾನ ಶಂಕರ್ ಭಟ್ ಮತ್ತಿತರರು ಇದ್ದರು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ನೆರವು ವಿತರಣೆ

ಹಿಂದು ಧರ್ಮ, ಸಂಸ್ಕೃತಿ ಬಗ್ಗೆ ನೈಜ ಕಳಕಳಿಯಿಂದ ಧೈರ್ಯದಿಂದ ಮಾತನಾಡುವ ಶ್ರೀಪಾದರನ್ನು ಸರ್ಕಾರಗಳು ದೂರ ಇಟ್ಟಿವೆ. ಅವರ ಕನಸಿನ ದೇವಸ್ಥಾನ ನಿರ್ಮಾಣಕ್ಕೆ ಇದುವರೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ವಿಷಯ ತಿಳಿದುಕೊಂಡಿದ್ದೇನೆ. ಯಾವುದೇ ಸರ್ಕಾರಗಳಿಗೆ ಅವಲಂಬಿತವಾಗಿರದ ಹಿಂದು ಸಮಾಜ ಮನಸ್ಸು ಮಾಡಿದರೆ ಇಲ್ಲಿ ದೇವಾಲಯ ತಲೆ ಎತ್ತಲು ಹೆಚ್ಚು ದಿನ ಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net