ಅಲೆಮಾರಿಗಳ ಸಮಸ್ಯೆಗೆ ಪರಿಹಾರ : ಪಲ್ಲವಿ ಜಿ.

ಕುಂದುಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಪಲ್ಲವಿ ಜಿ. ಉದ್ಘಾಟಿಸಿದರು. ಪ್ರಮುಖರಾದ ಆನಂದ ಕುಮಾರ್ ಏಕಲವ್ಯ, ಶೇಖರ್ ಕುಕ್ಕೇಡಿ, ಪದ್ಮನಾಭ ಸಾಲ್ಯಾನ್, ಕೆ.ನೇಮಿರಾಜ್, ಸೌಮ್ಯಾ, ಮಾರಿಟಾ ಪಿಂಟೋ ಮತ್ತಿತರರಿದ್ದರು.
ಕುಂದುಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಪಲ್ಲವಿ ಜಿ. ಉದ್ಘಾಟಿಸಿದರು. ಪ್ರಮುಖರಾದ ಆನಂದ ಕುಮಾರ್ ಏಕಲವ್ಯ, ಶೇಖರ್ ಕುಕ್ಕೇಡಿ, ಪದ್ಮನಾಭ ಸಾಲ್ಯಾನ್, ಕೆ.ನೇಮಿರಾಜ್, ಸೌಮ್ಯಾ, ಮಾರಿಟಾ ಪಿಂಟೋ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಂದುಕೊರತೆ, ಪ್ರಗತಿ ಪರಿಶೀಲನಾ ಸಭೆ
  • ಕರಾವಳಿಯ ಬುಡುಕಟ್ಟು ಸಮುದಾಯ ಸಮಸ್ಯೆ
  • 2 ವರ್ಷ ಕಳೆದರೂ ದುರಸ್ತಿಯಾಗದ ಕುತ್ಲೂರಿನ ಸೇತುವೆ
ಸುಲ್ಕೇರಿ ಗ್ರಾಮದ ಕೊರಗ ಸಮುದಾಯದ ಸವಿತಾ ಅವರು, ಕೃಷಿಗೆ ಜಾಗ ಕೇಳಿದರೆ ತಾಲೂಕು ಆಡಳಿತ ಅದನ್ನು ಬಿಟ್ಟು 94ಸಿನಲ್ಲಿ ನಿವೇಶನ ಹಂಚಲು ಹೊರಟಿದೆ. ನಮಗೆ 50 ಸೆಂಟ್ಸ್ ಜಾಗ ಬೇಕು ಎಂದರು. ಎಲ್ಲರೂ ಒಪ್ಪಿಗೆ ಪತ್ರ ನೀಡುವುದಾದರೆ 2.50 ಎಕರೆಯನ್ನು ಐಟಿಡಿಪಿಗೆ ನೀಡಿ ನಿಮಗೆ ಹಂಚಲು ಕ್ರಮ ವಹಿಸುತ್ತೇನೆ ಎಂದು ತಹಸೀಲ್ದಾರ್ ಭರವಸೆ ನೀಡಿದರು.
ನಿಗಮದ ಜಂಟಿ ಕಾರ್ಯದರ್ಶಿ ಆನಂದ ಕುಮಾರ್ ಏಕಲವ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಸದಸ್ಯರಾದ ಕೆ.ನೇಮಿರಾಜ್, ಸೌಮ್ಯಾ, ಮಾರಿಟಾ ಪಿಂಟೋ, ಪ.ಜಾತಿ ಮತ್ತು ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯಾನಂದ ಪಿಲಕ್ಕಲ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಶಮಿಷ್ಟಾ, ವೇಣೂರು ವಲಯ ಅರಣ್ಯಾಕಾರಿ ಭರತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ಜನಾರ್ದನ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ವಿಜಯ್ ಕುಮಾರ್ ಉಪಸ್ಥಿತರಿದ್ದರು. ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಮುಂಡಾಜೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯ ಶಿಕ್ಷಕ ಮುರಳಿಧರ್ ನಿರೂಪಿಸಿದರು.

ಸೇತುವೆಗೆ 50 ಲಕ್ಷ ರೂ. ಮಂಜೂರು

ಕುದುರೆಮುಖದ ಸಂತ್ರಸ್ತ ಮಲೆಕುಡಿಯರ ಪುನರ್ ವಸತಿಗಾಗಿ ಸುಲ್ಕೇರಿ ಗ್ರಾಮದಲ್ಲಿ ಮೀಸಲಿಟ್ಟ 190 ಎಕರೆ ಏನಾಗಿದೆ ಎಂದು ಹರೀಶ್ ಎಳನೀರು ಪ್ರಶ್ನಿಸಿದರು. ತಹಸೀಲ್ದಾರ್ ಉತ್ತರಿಸಿ, ಹಿಂದೆ ಸ್ಥಳೀಯವಾಗಿ ಪರಿಶೀಲಿಸಿ ಜಾಗ ಮೀಸಲಿಟ್ಟಿದ್ದು, ಈಗ ಅಲ್ಲಿ ಜಾಗವೇ ಇಲ್ಲವಾಗಿದೆ. ಜತೆಗೆ ಹೋಗಿರುವ ಜಾಗಕ್ಕೆ ಹಣ ಪಡೆದು ಬಂದರೆ ಪುನರ್ ವಸತಿ ನೀಡುವ ಪ್ರಶ್ನೆ ಬರುವುದಿಲ್ಲ ಎಂದರು. ನಾರಾವಿ ಕುತ್ಲೂರಿನ ಪೂವಪ್ಪ ಮಾತನಾಡಿ, ಕುತ್ಲೂರಿನ ಸೇತುವೆ ಮುರಿದು 2 ವರ್ಷ ಕಳೆದರೂ ದುರಸ್ತಿಯಾಗಿಲ್ಲ ಎಂದು ಆರೋಪಿಸಿದರು. ಸೇತುವೆಗೆ 2 ದಿನಗಳ ಹಿಂದಷ್ಟೇ 50 ಲಕ್ಷ ರೂ. ಮಂಜೂರಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲು ಸೂಚಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ವಸತಿ ಸಮಸ್ಯೆ ಪರಿಹರಿಸಿ

ಧರ್ಮಸ್ಥಳದ ಕೊರಗ ಸಮುದಾಯದ ಚೋಮು ಅವರು ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗೆ ಕಂತಿನ ಹಣ ಬಂದಿಲ್ಲ ಎಂದು ಆರೋಪಿಸಿದಾಗ, 15 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ನಿಗಮದ ಅಧ್ಯಕ್ಷರು ವಸತಿ ನಿಗಮದ ಎಂಡಿ ಅವರನ್ನು ಸಂಪರ್ಕಿಸಿ ಚೋಮು ಅವರ ಮಾಹಿತಿಯನ್ನು ಕಳುಹಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಕಾಲುಸಂಕಕ್ಕೆ ಪ್ರಸ್ತಾವನೆ

ಸುಲ್ಕೇರಿಯಲ್ಲಿ ಕೊರಗ ಸಮುದಾಯದ ಕಾಲನಿ ಬಳಿಗೆ ಮಂಜೂರಾದ ಕಾಲುಸಂಕವನ್ನು ರಾಜಕೀಯ ಕಾರಣಕ್ಕೆ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಶೇಖರ್ ಲಾಲ ಆರೋಪಿಸಿದರು. ಪ್ರಸ್ತುತ ಅಲ್ಲಿ ಕಾಲುಸಂಕ ನಿರ್ಮಾಣಕ್ಕೆ 75 ಲಕ್ಷ ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net