ಮೂರು ತಿಂಗಳೊಳಗೆ ಸಮಸ್ಯೆ ನಿವಾರಣೆ : ಡಿಡಿಐಪಿ ಜಿ.ಎಸ್.ಶಶಿಧರ್

ಬೆಳ್ತಂಗಡಿಯಲ್ಲಿ ನಡೆದ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕ ವಾರ್ಷಿಕ ಮಹಾಸಭೆಯಲ್ಲಿ ಡಿಡಿಪಿಐ ಜಿ.ಎಸ್.ಶಶಿಧರ ಅವರನ್ನು ಗೌರವಿಸಲಾಯಿತು.
ಬೆಳ್ತಂಗಡಿಯಲ್ಲಿ ನಡೆದ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕ ವಾರ್ಷಿಕ ಮಹಾಸಭೆಯಲ್ಲಿ ಡಿಡಿಪಿಐ ಜಿ.ಎಸ್.ಶಶಿಧರ ಅವರನ್ನು ಗೌರವಿಸಲಾಯಿತು.
Published on
ಜಿಲ್ಲೆಯ ಎಲ್ಲ ಶಿಕ್ಷಕರ ಸಂಘಟನೆಗಳೊಂದಿಗೆ ಚರ್ಚಿಸಿ ಮೂರು ತಿಂಗಳ ಅವಧಿಯಲ್ಲಿ ಪೇಪರ್‌ಲೆಸ್ ಆಡಳಿತದ ಮೂಲಕ ತಮ್ಮ ವ್ಯಾಪ್ತಿಯ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಡಿಡಿಪಿಐ ಜಿ.ಎಸ್.ಶಶಿಧರ ಭರವಸೆ ನೀಡಿದರು.
ಬೆಳ್ತಂಗಡಿ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕ ಮಹಾಸಭೆಯಲ್ಲಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಹೊಸ ವಿಧಾನಗಳ ಅಳವಡಿಕೆಯೊಂದಿಗೆ ಸೃಜನಶೀಲತೆಯಿಂದ ವಿದ್ಯಾರ್ಥಿಗಳ ಕನಸುಗಳನ್ನು ಬೆಂಬಲಿಸಬೇಕು ಎಂದರು.
ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯೋಗೇಶ್ ಎಚ್.ಆರ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘ ಅಧ್ಯಕ್ಷ ದಿಲೀಪ್ ಕುಮಾರ್ ಉದ್ಘಾಟಿಸಿ ಶುಭಹಾರೈಸಿದರು.
ಬಿಇಒ ತಾರಾಕೇಸರಿ, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ದೊರೆಸ್ವಾಮಿ ಕೆ.ಎನ್ ಶುಭಹಾರೈಸಿದರು.
ರಾಜ್ಯ ಸಂಘದ ಸಂಸ್ಥಾಪಕ ವಕ್ತಾರ ರವಿಕುಮಾರ್ ಬಿ.ಆರ್. ಸ್ವಾಗತಿಸಿದರು. ಶುಭಾ ವಿಕಾಸ್ ಸನ್ಮಾನ ಪತ್ರ ವಾಚಿಸಿದರು. ಸತೀಶಾಚಾರ್ ವಂದಿಸಿದರು. ಶಾರದಾ ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ಆರ್.ಎನ್., ರವಿಕುಮಾರ್ ಜೆ., ಉಷಾ, ಮಧು ಕೆ.ಎಸ್, ಶಿಕ್ಷಕರು ಸಹಕರಿಸಿದರು.

ಗಣ್ಯರಿಗೆ ಗೌರವಾರ್ಪಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net