೩.೭೭ಲಕ್ಷ ಫಲಾನುಭವಿಗಳಿಗೆ ೬೧೫ ಕೋಟಿ ರೂ. ಬಿಡುಗಡೆ GUARANTEE
ಪುತ್ತೂರು ತಾಪಂನಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ತಾಪಂ ಯೋಜನಾಽಕಾರಿ ಶೋಭಾ, ಆಹಾರ ಇಲಾಖೆಯ ಸರಸ್ವತಿ ಉಪಸ್ಥಿತರಿದ್ದರು.
ಪುತ್ತೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ೩.೭೭ ಲಕ್ಷ ಫಲಾನುಭವಿಗಳಿಗೆ ೬೧೫ ಕೋಟಿ ರೂ.ಗೂ ಅಽಕ ಮೊತ್ತ ಬಿಡುಗಡೆಯಾಗಿದೆ. ದೊಡ್ಡ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ, ಭ್ರಷ್ಟಾಚಾರ ರಹಿತವಾಗಿ ನೇರವಾಗಿ ಫಲಾನುಭವಿಗೆ ತಲುಪಿಸಲಾಗುತ್ತಿದೆ. ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ ಗ್ಯಾರಂಟಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಿಸಲಾಗುತ್ತಿದೆ ಎಂದು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಹೇಳಿದರು.
ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಯುವನಿಧಿ ಫಲಾನುಭವಿ ಮುರ ಗ್ರಾಮದ ಯುವತಿಯೊಬ್ಬರು ಎಂಡಿ ಮಾಡುತ್ತಿದ್ದಾರೆ. ಪ್ರತಿಯೊಬ್ಬರನ್ನು ಸಮೀಕ್ಷೆ ಮಾಡಿ ಒಳ್ಳೆಯ ಸಾಧನೆಯನ್ನು ಗುರುತಿಸುವಂತಾಗಬೇಕು. ಆಹಾರ ಇಲಾಖೆ ಅಽಕಾರಿಗಳು ಪಡಿತರ ಅಂಗಡಿಗಳ ಅಕ್ಕಿ ಪರಿಶೀಲಿಸಬೇಕು. ಜನರಿಗೆ ಅಕ್ಕಿ ಸರಿಯಾಗಿ ಸಿಗಬೇಕು. ಸಂಜೆ ವೇಳೆ ಮಹಿಳೆಯರಿಗೆ ಬಸ್ ನಿಲ್ಲಿಸದೆ ಹೋಗುವ ಬಗ್ಗೆ ದೂರು ಬರುತ್ತಿದ್ದು, ದುಡಿಮೆ ಮಾಡಿ ಹೋಗುವವರಿಗೆ ತೊಂದರೆಯಾಗಬಾರದು. ಸ್ಟಾಪ್ ನೀಡದ ಬಸ್ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದರು.
ಪುತ್ತೂರು ಕೆಎಸ್‌ಆರ್‌ಟಿಸಿ ಸುಬ್ರಹ್ಮಣ್ಯ ಪ್ರಕಾಶ್, ಮೆಸ್ಕಾಂ ಎಇಇ ಶಿವಶಂಕರ, ಜಿಲ್ಲಾ ಉದ್ಯೋಗ ವಿನಿಮಯ ಹಂಚಿಕೆ ಕೇಂದ್ರದ ಮಂಜೂಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಹರೀಶ್, ಆಹಾರ ಇಲಾಖೆಯ ಸರಸ್ವತಿ ಮಾಹಿತಿ ನೀಡಿದರು. ತಾಪಂ ಯೋಜನಾಧಿಕಾರಿ ಶೋಭಾ ಉಪಸ್ಥಿತರಿದ್ದರು.
ಅಗತ್ಯ ಕ್ರಮಕ್ಕೆ ಆಗ್ರಹ
ಉಪ್ಪಿನಂಗಡಿ ಭಾಗದಲ್ಲಿ ಗೃಹಲಕ್ಷ್ಮಿ ಅರ್ಜಿ ಪಡೆಯುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಭಾಗದಲ್ಲಿ ಸ್ಥಳೀಯ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹಿರೇಬಂಡಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ವಿದ್ಯುತ್ ಪರಿವರ್ತಕದ ಅವಶ್ಯಕತೆಯಿದ್ದು, ಇದನ್ನು ತುರ್ತು ಆದ್ಯತೆಯಾಗಿ ಪರಿಗಣಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.