ಬ್ರಹ್ಮರಥ, ಪಂಚಮಿ ರಥ ನಿರ್ಮಾಣಕ್ಕೆ ಗೂಟಪೂಜೆ : ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ಸುಬ್ರಹ್ಮಣ್ಯ ದೇವಳದ ರಥಗಳಿಗೆ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಗೂಟ ಪೂಜೆ ನೆರವೇರಿಸಿದರು.
ಸುಬ್ರಹ್ಮಣ್ಯ ದೇವಳದ ರಥಗಳಿಗೆ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಗೂಟ ಪೂಜೆ ನೆರವೇರಿಸಿದರು.
Published on
ಸುಬ್ರಹ್ಮಣ್ಯ:ಮಹತೋಭಾರಕುಕ್ಕೆ ಶ್ರೀ ಸುಬ್ರಹ್ಮಣ್ಯದೇವಸ್ಥಾನದ ವಾರ್ಷಿಕ ಚಂಪಾಷಷ್ಠಿಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವರಥಗಳಿಗೆ ಗೂಟ ಪೂಜಾ ಮುಹೂರ್ತಬುಧವಾರ ನೆರವೇರಿತು.ದೇಗುಲದಲ್ಲಿಪೂಜೆ ನೆರವೇರಿದ ಬಳಿಕ ಜಾತ್ರಾಸಮಯದಲ್ಲಿ ಎಳೆಯುವ ಬ್ರಹ್ಮರಥಮತ್ತು ಪಂಚಮಿ ರಥಗಳನ್ನು ನಿರ್ಮಿಸಲುಬುಧವಾರ ಗೂಟ ಪೂಜೆ ಮುಹೂರ್ತವನ್ನುಕ್ಷೇತ್ರ ಪುರೋಹಿತ ಮಧುಸೂದನಕಲ್ಲೂರಾಯ ನೆರವೇರಿಸಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದವ್ಯವಸ್ಥಾಪನಾ ಸಮಿತಿ ಅಧ್ಯಕ್ಷಹರೀಶ್ ಎಸ್.ಇಂಜಾಡಿ,ಕಾರ್ಯನಿರ್ವಹಣಾಧಿಕಾರಿಅರವಿಂದ ಅಯ್ಯಪ್ಪ ಸುತಗುಂಡಿ,ಸಹಾಯಕಕಾರ್ಯನಿರ್ವಹಣಾಧಿಕಾರಿಎಸ್.ಜೆ.ಯೇಸುರಾಜ್,ವ್ಯವಸ್ಥಾಪನಾಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ,ಸೌಮ್ಯಾಭರತ್,ಅಜಿತ್ಕುಮಾರ್,ಲೀಲಾಮನಮೋಹನ್,ಪ್ರವೀಣರೈ ಮರುವಂಜ,ಮಾಸ್ಟರ್ಪ್ಲಾನ್ ಸಮಿತಿ ಸದಸ್ಯರಾದ ಪವನ್ಎಂ.ಡಿ,ಸತೀಶ್ಕೂಜುಗೋಡು,ಲೋಲಾಕ್ಷಕೈಕಂಬ,ಅಚ್ಯುತಗೌಡ ಬಳ್ಪ,ಕಚೇರಿಅಧೀಕ್ಷಕ ಕೆ.ಎಂ.ಗೋಪಿನಾಥ್ನಂಬೀಶ,ಶಿಷ್ಠಾಚಾರಅಧಿಕಾರಿ ಜಯರಾಮ ರಾವ್,ಹೆಬ್ಬಾರ್ಪ್ರಸನ್ನ ಭಟ್,ದೇವಳದಪಾಟಾಳಿ ಲೋಕೇಶ್ ಎ.ಆರ್,ಮೂಲನಿವಾಸಿಮಲೆಕುಡಿಯ ಜನಾಂಗದ ಗುರಿಕಾರಚಂದ್ರಶೇಖರ ಕೋಡಿಕಜೆ,ಹಿರಿಯರಾದವೇದ ಮಲೆ,.ವಿ.ನಾಗೇಶ್,ಮೋಂಟಮಲೆ,ಚನಿಯಪ್ಪಮಲೆ,.ವಿ.ನಾರಾಯಣಮಲೆ,ಶಿವಕುಮಾರ್ಅರ್ಗುಡಿ,ಪ್ರಮುಖರಾದಭಾಸ್ಕರ ಅರ್ಗುಡಿ,ರೋಹಿತಾಕ್ಷ,.ಎನ್.ಜಗದೀಶ್,ದಿನಕರ,ಶ್ರೇಯಸ್,ಧನುಷ್,ಪದ್ಮಯ್ಯಸೇರಿದಂತೆ ರಥಕಟ್ಟುವ ಮೂಲ ನಿವಾಸಿಮಲೆಕುಡಿಯ ಜನಾಂಗದ 60ಯುವಕರುಮತ್ತು ಭಕ್ತರು ಉಪಸ್ಥಿತರಿದ್ದರು.

ಮಲೆಕುಡಿಯಗುರಿಕಾರರಿಗೆ ವೀಳ್ಯ

ಬ್ರಹ್ಮರಥಕ್ಕೆಅಳವಡಿಸುವ ಗೂಟಗಳಿಗೆ ಪೂಜೆನೆರವೇರಿಸಿದದ ಬಳಿಕ ಪಂಚಮಿ ರಥದಗೂಟಗಳಿಗೆ ಪೂಜೆ ನಡೆಯಿತು.ಪೂರ್ವಶಿಷ್ಟಸಂಪ್ರದಾಯದಂತೆ ರಥ ಕಟ್ಟಲಿರುವಮೂಲನಿವಾಸಿ ಮಲೆಕುಡಿಯ ಜನಾಂಗದಗುರಿಕಾರರಿಗೆ ರಥ ಕಟ್ಟಲು ಪ್ರಸಾದರೂಪದಲ್ಲಿ ವೀಳ್ಯ ನೀಡಿದರು.ನಂತರಮೂಲನಿವಾಸಿ ಮಲೆಕುಡಿಯ ಜನಾಂಗದವರುಬ್ರಹ್ಮರಥ ಮತ್ತು ಪಂಚಮಿ ರಥಕ್ಕೆಗೂಟ ನೆಡುವ ಕೈಂಕರ್ಯ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net