ಅಪಘಾತ ಗೂಡ್ಸ್ ಆಟೋ ರಿಕ್ಷಾ ಚಾಲಕ ಮೃತ್ಯು

ಅಪಘಾತದಲ್ಲಿ ನಜ್ಜು ಗುಜ್ಜಾದ ಗೂಡ್ಸ್ ಆಟೋ ರಿಕ್ಷಾ.
ಅಪಘಾತದಲ್ಲಿ ನಜ್ಜು ಗುಜ್ಜಾದ ಗೂಡ್ಸ್ ಆಟೋ ರಿಕ್ಷಾ.
Published on: 

ಮಂಗಳೂರು: ಕರಂಗಲಪಾಡಿಯಿಂದ ನ್ಯಾಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಗೂಡ್ಸ್ ಅಟೋ ಚಾಲಕ ಗಂಭೀರ ಗಾಯಗೊಂಡು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕಾಸರಗೋಡು ಮೊಗ್ರಾಲ್ ನಿವಾಸಿ ಚಂದ್ರ ಕೆ.(67) ಮೃತಪಟ್ಟ ದುರ್ದೈವಿ. ನ್ಯಾಯಾಧೀಶ ವಿನಯ್ ಡಿ. ಹಾಗೂ ಸ್ಕೂಟರ್ ಸವಾರ ಪ್ಲೇವಿಯನ್ ಮೆರ್ವಿನ್ ಗಾಯಗೊಂಡಿದ್ದಾರೆ.

ಘಟನೆ ವಿವರ: ಚಂದ್ರ ಅವರು ಗೂಡ್ಸ್ ಆಟೋ ರಿಕ್ಷಾ ಚಲಾಯಿಸಿಕೊಂಡು ಕೋರ್ಟು ರಸ್ತೆಯಿಂದ ಕರಂಗಲಪಾಡಿಯ ಕಡೆಗೆ ಬರುತ್ತಿದ್ದರು. ಈ ಸಂದರ್ಭ ನ್ಯಾಯಾಧೀಶ ವಿನಯ್ ಡಿ. ಅವರು ಕರ್ತವ್ಯಕ್ಕೆ ನ್ಯಾಯಾಲಯದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಕೋರ್ಟ್ ರಸ್ತೆಗೆ ತಿರುಗುವಲ್ಲಿ ರಾಧಾ ಮೆಡಿಕಲ್ ಎದುರು ಅತಿ ವೇಗವಾಗಿ ಬಂದ ಗೂಡ್ಸ್ ರಿಕ್ಷಾ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದು, ಪಲ್ಟಿಯಾಗಿ ಅಲ್ಲಿದ್ದ ಸ್ಕೂಟರ್‌ನ ಮೇಲೆ ಬಿದ್ದಿದೆ. ರಿಕ್ಷಾ ಚಾಲಕ ಅದರಲ್ಲಿ ಸಿಲುಕಿಕೊಂಡಿದ್ದು, ಸಾರ್ವಜನಿಕರು ಹೊರಗಡೆ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಣಾಮ ಸ್ಕೂಟರ್ ಸವಾರನಿಗೂ ಗಾಯವಾಗಿದೆ.

ಅಪಘಾತದ ಸಂದರ್ಭ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ ಕಾರಣ ಮುಖ್ಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಿದರು. ಅಪಘಾತದಲ್ಲಿ ಗೂಡ್ಸ್ ಟೆಂಪೋ, ಕಾರು ಹಾಗೂ ಸ್ಕೂಟರ್ ಜಖಂಗೊಂಡಿದೆ. ಈ ಬಗ್ಗೆ ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net