ತರಬೇತಿಯಿಂದ ಉತ್ತಮ ಅವಕಾಶ

ಆರಿ ಕೌಶಲ ತರಬೇತಿಗೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಚಾಲನೆ ನೀಡಿದರು. ಎನ್‌ಆರ್‌ಎಲ್‌ಎಂ ಉಳ್ಳಾಲ ವಿಭಾಗ ವ್ಯವಸ್ಥಾಪಕ ವಿಶ್ ರಾಜ್, ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೌಶಲ ತರಬೇತಿ
  • ಜ್ಯೋತಿ ರಾಜ್ ಅಭಿಪ್ರಾಯ
ಉಳ್ಳಾಲ: ಆರಿ ಕೌಶಲ್ಯ ಎಂಬುದು ಯಾವಾಗಲೂ ಬೇಡಿಕೆಯಲ್ಲಿರುವ ಉದ್ಯೋಗವಾಗಿದ್ದು, ಸರಿಯಾಗಿ ತರಬೇತಿ ಪಡೆದರೆ ಜೀವನ ಸಾಗಿಸಲು ಉತ್ತಮ ಅವಕಾಶವಿದೆ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅಭಿಪ್ರಾಯಪಟ್ಟರು.
ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಇರಾ ಗ್ರಾಪಂ ಐಸಿರಿ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ 15 ದಿನ ನಡೆಯಲಿರುವ ಉಚಿತ ಆರಿ ಕೌಶಲ ತರಬೇತಿಗೆ ಬುಧವಾರ ಗ್ರಾಪಂ ಸಭಾಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಎನ್‌ಆರ್‌ಎಲ್‌ಎಂ ಉಳ್ಳಾಲ ವಿಭಾಗ ವ್ಯವಸ್ಥಾಪಕ ವಿಶ್ ರಾಜ್, ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿದರು. ಇರಾ ಪಿಡಿಒ ಅಕ್ಷಿತಾ, ಒಕ್ಕೂಟ ಅಧ್ಯಕ್ಷೆ ಸುಜಾತಾ, ಸಂಪನ್ಮೂಲ ವ್ಯಕ್ತಿ ಕಾಂಚನ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ನಳಿನಿ ಸ್ವಾಗತಿಸಿದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಆಶಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net