ಮಳೆ ನೀರು ಕೊಯ್ಲು ಜನಜಾಗೃತಿ ಅಭಿಯಾನವನ್ನು ವಾಲ್ಟರ್ ಡಿಮೆಲ್ಲೋ ಉದ್ಘಾಟಿಸಿದರು. ಅಶ್ರಫ್ ಆಲಿಕುಂಞಿ, ಕ್ಲಿರ್ಫಡ್ ಸೈಮನ್ ಪಿಂಟೊ, ವಿನ್ಸೆಂಟ್ ಲೋಬೋ, ತೋಮಸ್ ಪಿಂಟೊ ಉಪಸ್ಥಿತರಿದ್ದರು.
Published on:
Copied
Follow Us
ಬೆಳ್ತಂಗಡಿ: ದೇವರು ಮಳೆಯ ರೂಪದಲ್ಲಿ ನಮಗೆ ನೀಡುವ ಜಲ ಅದು ನಮ್ಮೆಲ್ಲರ ಜೀವಜಲ. ಅದನ್ನು ಸಂರಕ್ಷಿಸಿ ಸುಂದರ ಪ್ರಕೃತಿಯನ್ನು ನಾಳೆಗೆ ಉಳಿಸಿಹೋಗಬೇಕು ಎಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ವಾಲ್ಟರ್ ಡಿಮೆಲ್ಲೋ ಹೇಳಿದರು.
ಭಾನುವಾರ ಚರ್ಚ್ ಪಾಲನಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆ ಸಹಯೋಗದಲ್ಲಿ ಚರ್ಚ್ ವಠಾರದಲ್ಲಿ ಮಳೆ ನೀರು ಕೊಯ್ಲು ಜನಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾತನಾಡಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಞ ಮುಂಡಾಜೆ, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಕ್ಲಿರ್ಫಡ್ ಸೈಮನ್ ಪಿಂಟೊ, ಹೊಸಬೆಳಕು ಒಕ್ಕೂಟದ ಅಧ್ಯಕ್ಷ ವಿನ್ಸೆಂಟ್ ಲೋಬೋ, ಚರ್ಚ್ ಪಾಲನಾ ಸಮಿತಿ ಆಯೋಗದ ಸಂಚಾಲಕ ತೋಮಸ್ ಪಿಂಟೊ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಾಲ್ಟರ್ ಮೊನಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ ವಂದಿಸಿದರು. ರೆನ್ನಿ ಟೀಚರ್ ನಿರೂಪಿಸಿದರು.