ಮಂಗಳೂರು ಕದ್ರಿ ಪಾರ್ಕ್ ಸ್ಮಾಟಿ ಸಿಟಿ ವಲಯದಲ್ಲಿ ತ್ಯಾಜ್ಯ ರಾಶಿ

ಕದ್ರಿ ಉದ್ಯಾನವನದ ಸ್ಮಾರ್ಟ್ ಸಿಟಿ ವಲಯದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ತರಗೆಲೆ ರಾಶಿ, ಮರದ ತುಂಡುಗಳು ಬಿದ್ದಿದೆ.
ಕದ್ರಿ ಉದ್ಯಾನವನದ ಸ್ಮಾರ್ಟ್ ಸಿಟಿ ವಲಯದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ತರಗೆಲೆ ರಾಶಿ, ಮರದ ತುಂಡುಗಳು ಬಿದ್ದಿದೆ.
Published on
ಮಂಗಳೂರು: ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪದುವ ಜಂಕ್ಷನ್‌ನಿಂದ ಸರ್ಕೀಟ್ ಹೌಸ್ ಜಂಕ್ಷನ್ ತನಕ ನಿರ್ಮಾಣ ಮಾಡಿದ ಕದ್ರಿ ಉದ್ಯಾನವನದ ಸ್ಮಾರ್ಟ್ ಸಿಟಿ ವಲಯದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ತರಗೆಲೆ ರಾಶಿ, ಮರದ ತುಂಡುಗಳು ಬಿದ್ದಿದೆ. ಈ ತ್ಯಾಜ್ಯ ಹಲವು ಸಮಯಗಳಿಂದ ಕೊಳೆಯುತ್ತಾ ಸೊಳ್ಳೆ ಉತ್ಪಾದನಾ ತಾಣವಾಗಿ ಪರಿವರ್ತನೆಯಾಗಿದೆ. 
ನಗರದ ಅತಿ ದೊಡ್ಡದಾದ ಕದ್ರಿ ಪಾರ್ಕ್‌ಗೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನಗರದ ನಿವಾಸಿಗಳು ಅಲ್ಲದೆ ದೂರದ ಊರುಗಳಿಂದಲೂ ಬರುತ್ತಾರೆ. ಆದರೆ ಅವರನ್ನು ತ್ಯಾಜ್ಯ ರಾಶಿಯೇ ಸ್ವಾಗತ ಮಾಡುವಂತಿದೆ. ವಾರಕ್ಕೊಂದು ಬಾರಿಯಾದರೂ ಇಲ್ಲಿನ ತ್ಯಾಜ್ಯವನ್ನು ಶುಚಿಗೊಳಿಸಿದರೂ ಇಷ್ಟೊಂದು ರಾಶಿ ಬೀಳಲು ಸಾಧ್ಯವಿಲ್ಲ. 

ನಿರ್ವಹಣೆ ಕೊರತೆ

ಮಂಗಳೂರಿನಲ್ಲಿ ಕೋಟ್ಯಂತರ ರೂ. ಯೋಜನೆಗಳನ್ನು ರೂಪಿಸಲಾಗುತ್ತದೆ. ಆಗ ಇರುವ ಆಸಕ್ತಿ ಕಾಮಗಾರಿ ಮುಗಿದ ಬಳಿಕ ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಯಾರಿಗೂ ಇಲ್ಲ. ಕಾವೂರು ಕೆರೆ ಅಭಿವೃದ್ಧಿಗೊಂಡು ಎರಡು ವರ್ಷ ಕಳೆದರೂ ಅದರ ನಿರ್ವಹಣೆ ಯಾರು ಮಾಡಬೇಕೆಂದು ಇನ್ನೂ ನಿರ್ಧಾರ ಆಗಿಲ್ಲ. ಮಲ್ಲಿಕಟ್ಟೆಯಲ್ಲಿ ಪಾರ್ಕ್ ಅಭಿವೃದ್ಧಿಗೊಂಡು ಅದು ಕೂಡಾ ನಿರ್ವಹಣೆ ಆಗದೆ ಮೊದಲಿನ ಸ್ಥಿತಿಗೆ ತಲುಪಿದೆ. ನಿರ್ವಹಣೆ ಮಾಡದವರು ಅದರ ಅಭಿವೃದ್ಧಿ ಮಾಡುವ ಉದ್ದೇಶ ಏನೆಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಿತ್ತು ಹೋದ ನಾಮಫಲಕ
ಕದ್ರಿ ಉದ್ಯಾನವನದ ಸ್ಮಾರ್ಟ್‌ಸಿಟಿ ವಲಯದಲ್ಲಿ ಅಳವಡಿಸಿದ ಸ್ಮಾರ್ಟ್‌ಸಿಟಿ ನಾಮಫಲಕದ ಅಕ್ಷರಗಳು ಕಿತ್ತು ಹೋಗಿವೆ. ಕಲ್ಲು ಬೆಂಚುಗಳಲ್ಲಿ ಮಳೆಗೆ ಪಾಚಿ ಬೆಳೆದಿದ್ದು, ಅದನ್ನು ಶುಚಿಗೊಳಿಸಲು ಕೆಲಸ ಆಗಬೇಕಾಗಿದೆ. ಪಾರ್ಕ್‌ನೊಳಗೆ ಆಟದ ಸಲಕರಣೆಗಳು ಹದಗೆಡುತ್ತಿದ್ದು, ಅದರ ನಿರ್ವಹಣೆಯೂ ಆಗಬೇಕಾಗಿದೆ. ಕುಡಿಯುವ ನೀರು ಪೂರೈಕೆ, ಶೌಚಗೃಹ ನಿರ್ವಹಣೆಯೂ ವ್ಯವಸ್ಥಿತವಾಗಿ ನಡೆಯಬೇಕಾಗಿದೆ. 

ಕದ್ರಿ ಉದ್ಯಾನವನದ ಹೊರಗಡೆ ಸ್ಮಾರ್ಟ್‌ಸಿಟಿ ವಲಯದಲ್ಲಿ ಸೌಂದರ್ಯ ಕಾಪಾಡುವುದು ಪ್ರಥಮ ಆದ್ಯತೆಯಾಗಿದೆ. ಬಿದ್ದಿರುವ ತ್ಯಾಜ್ಯ ರಾಶಿಯನ್ನು ತೆರವು ಮಾಡಲು ಸೂಚನೆ ನೀಡಲಾಗುವುದು.

ಮಂಗಳೂರು ನಗರದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪಾರ್ಕ್ ಕದ್ರಿ. ಪಾರ್ಕ್‌ನೊಳಗೆ ಹಾಗೂ ಹೊರಗೆ ಶುಚಿತ್ವಕ್ಕೆ ಆದ್ಯತೆ ನೀಡುವ ಜತೆಗೆ ಕುಡಿಯುವ ನೀರು, ಶೌಚಗೃಹ ಒದಗಿಸುವುದು ಅತಿ ಅಗತ್ಯ. ಅಭಿವೃದ್ಧಿ ಸಂದರ್ಭ ಮಾಡಿರುವ ಎಡವಟ್ಟಿನಿಂದ ಪಾರ್ಕಿಂಗ್ ಸಮಸ್ಯೆಯೂ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net