ಕರಾವಳಿ ಜಿಲ್ಲೆಯಾದ್ಯಂತ ಗಣೇಶ್ ಮೂವೀಸ್‌ನ ಪಿಚ್ಚರ್ ಸಿನಿಮಾ ತೆರೆಗೆ

 ಗೋಲ್ಡನ್ ಮೂವೀಸ್-ಶಿಲ್ಪಾ ಗಣೇಶ್ ನಿರ್ಮಾಣದ ಸಂದೀಪ್ ಬೆದ್ರ ನಿರ್ದೇಶನದ ‘ಪಿಚ್ಚರ್’ ಸಿನಿಮಾದ ಬಿಡುಗಡೆ ಸಮಾರಂಭವು ಶುಕ್ರವಾರ ಭಾರತ್ ಮಾಲ್‌ನ ಬಿಗ್‌ಸಿನಿಮಾಸ್‌ನಲ್ಲಿ ನಡೆಯಿತು.
ಗೋಲ್ಡನ್ ಮೂವೀಸ್-ಶಿಲ್ಪಾ ಗಣೇಶ್ ನಿರ್ಮಾಣದ ಸಂದೀಪ್ ಬೆದ್ರ ನಿರ್ದೇಶನದ ‘ಪಿಚ್ಚರ್’ ಸಿನಿಮಾದ ಬಿಡುಗಡೆ ಸಮಾರಂಭವು ಶುಕ್ರವಾರ ಭಾರತ್ ಮಾಲ್‌ನ ಬಿಗ್‌ಸಿನಿಮಾಸ್‌ನಲ್ಲಿ ನಡೆಯಿತು.
Published on

ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಸಂದೀಪ್ ಬೆದ್ರ ನಿರ್ದೇಶನದ ‘ಪಿಚ್ಚರ್’ ಸಿನಿಮಾದ ಬಿಡುಗಡೆ ಸಮಾರಂಭವು ಆ.7 ರಂದು ಭಾರತ್ ಮಾಲ್‌ನಲ್ಲಿರುವ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು.

ಉದ್ಘಾಟನಾ ಸಮಾರಮಭದಲ್ಲಿ ಮಾತನಾಡಿದ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಕರಾವಳಿ ಜಿಲ್ಲೆಯಿಂದ ಬಹಳಷ್ಟು ಕಲಾವಿದರು ಸ್ಯಾಂಡಲ್ ವುಡ್ ಗೆ ಹೋಗಿದ್ದಾರೆ. ನಿರ್ಮಾಪಕಿ ಶಿಲ್ಪಾಗಣೇಶ್ ಜಿಲ್ಲೆಯವರಾಗಿದ್ದು, ತುಳು ಸಿನಿಮಾ ಮಾಡುವ ಮೂಲಕ ಈ ಮಣ್ಣಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ತುಳು ರಂಗಭೂಮಿಯ ಬಹಳಷ್ಟು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶ್ ಎಂಬ ಪ್ರತಿಭಾವಂತನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಎಂದರು.
ಖ್ಯಾತ ನಿರ್ದೇಶಕ ಡಾ ದೇವದಾಸ್ ಕಾಪಿಕಾಡ್ ಮಾತನಾಡಿ, ನಿರ್ಮಾಪಕಿ ಶಿಲ್ಪಾಗಣೇಶ್ ತುಳುಚಿತ್ರರಂಗಕ್ಕೆ ಶಕ್ತಿಯಾಗಿ ಕೆಲಸ ಮಾಡಿದ್ದಾರೆ. ಕಿರಿಯರ ಜೊತೆಗೆ ಹಿರಿಯ ಕಲಾವಿದರಿಗೂ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶನ ಮೊದಲ ಸಿನಿಮಾ ಪ್ರಕಾಶಮಾನವಾಗಲಿ ಎಂದರು.
ಕಲಾವಿದರಾದ ಭೋಜರಾಜ್ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಪುಷ್ಪರಾಜ್ ಬೊಳ್ಳಾರ್, ನಾಯಕ ನಟ ನಿತ್ಯ ಪ್ರಕಾಶ್, ನಾಯಕಿ ನಟಿ ಅಮೃತ ಸದು, ನಿರ್ದೇಶಕ ಸಂದೀಪ್ ಬೆದ್ರ ಸಿನಿಮಾ ವಿತರಕ ಸಚಿನ್ ಉಪ್ಪಿನಂಗಡಿ ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
ಪಿಚ್ಚರ್ ಸಿನಿಮಾ ಮಂಗಳೂರು ಉಡುಪಿ, ಮಣಿಪಾಲ, ಕುಂದಾಪುರ, ಸುರತ್ಕಲ್ ಪಡುಬಿದ್ರೆ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ,ಸುಳ್ಯ ಮೊದಲಾದ ಕಡೆಗಳಲ್ಲಿ ತೆರೆಕಂಡಿದೆ. ಬಹುತೇಕ ಕರಾವಳಿಯ ಕಲಾವಿದರನ್ನೇ ಬಳಸಿಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡಿರುವ ಪಿಚ್ಚರ್ ಸಿನಿಮಾವು ರಾಜ್ಯಾಧ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದೆ. ಗೋಲ್ಡನ್ ಮೂವೀಸ್ ಬ್ಯಾನರ್‌ನಡಿಯಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಸಂದೀಪ್ ಬೆದ್ರ ಅವರು ನಿರ್ದೇಶಿಸಿದ್ದಾರೆ. ಇದು ಇವರು ನಿರ್ದೇಶಿಸಿರುವ ಚೊಚ್ಚಲ ಸಿನಿಮಾ.
---------------------
ಹಾಸ್ಯಕ್ಕೂ ಕೊರತೆ ಇರದ ಪಿಚ್ಚರ್
ಪಿಚ್ಚರ್ ಸಿನಿಮಾದಲ್ಲಿ ನಾಯಕ ನಟನಾಗಿ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿರುವುದು ಪ್ರಮುಖ ಅಂಶ. ಈ ಸಿನಿಮಾದಲ್ಲಿ ಬಹುತೇಕ ಕರಾವಳಿಯ ಎಲ್ಲ ಪ್ರಮುಖ ಕಲಾವಿದರೂ ಇದ್ದಾರೆ. ಆದ್ದರಿಂದ ಹಾಸ್ಯಕ್ಕೂ ಕೊರತೆ ಖಂಡಿತಾ ಇರುವುದಿಲ್ಲ. ಒಂದು ಉತ್ತಮ ಸಂದೇಶ ಹೊತ್ತುಕೊಂಡು, ಕುಟುಂಬ ಸಮೇತ ನೋಡುವಂಥ ಈ ಸಿನಿಮಾ ಒಂದು ವಿಶೇಷ ಕಥೆಯನ್ನೂ ಹೊಂದಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ.
----------------------
ತುಳು ಸಿನಿಮಾರಂಗದಲ್ಲಿ ಪ್ರಥಮ ಬಾರಿಗೆ ಸಿನಿಮಾ ನಿರ್ಮಿಸಿದ್ದೇನೆ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿ ಎಲ್ಲರಿಂದಲೂ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆತಿದೆ, ಪ್ರೀಮಿಯರ್ ಶೋಗಳಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ತುಳು ಬಾಷೆಗೆ ನೀಡಿದ ಒಂದು ಸಣ್ಣ ಕೊಡುಗೆ ಇದಾಗಿದ್ದು, ಸಿನಿ ಪ್ರೀಯರು ಯಶಸ್ವಿಯಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ.
-ಶಿಲ್ಪಾ ಗಣೇಶ್, ಚಿತ್ರ ನಿರ್ಮಾಪಕಿ
----------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net