ವಿದೇಶಿ ಉದ್ಯೋಗದ ಭರವಸೆ ನೀಡಿ ವಂಚನೆ

9 ಲಕ್ಷ ರೂ. ಪಡೆದು ಮೋಸ ಪ್ರಕರಣ ದಾಖಲು
Fraud
fraud
Published on: 

ಕಾಸರಗೋಡು: ವಿದೇಶದಲ್ಲಿ ಉದ್ಯೋಗ ವೀಸಾ ನೀಡುವುದಾಗಿ ತಿಳಿಸಿ ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ 9,00,000 ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತ್ರಿಶ್ಯೂರ್ ಸಿಟಿ ಪರಕ್ಕಾಡಿ ವೇಲತ್ತೂರು ಬಾವಿಲಿಲ್ ನಿವಾಸಿ ಅಲ್ಬಿನ್ ಥೋಮಸ್ (47) ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬಳೆ ಕೃಷ್ಣನಗರದ ಪವನ್ ಡಾನ್ಸಿಲ್ ಡಿಸೋಜ (31) ದೂರು ನೀಡಿದ್ದಾರೆ. ವಾಲ್ಟಾದಲ್ಲಿ ಉದ್ಯೋಗ ವೀಸಾ ನೀಡುವುದಾಗಿ ತಿಳಿಸಿ ಆರೋಪಿ ಅಲ್ಬಿನ್ ಥೋಮಸ್ 9 ಲಕ್ಷ ರೂ. ಹಣ ಪಡೆದು ನಂತರ ವೀಸಾವನ್ನಾಗಲಿ, ನೀಡಿದ ಹಣವನ್ನಾಗಲಿ ವಾಪಸ್ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.