

ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ಚಂಬಲ ಸಫಾನಗರ ನಿವಾಸಿ ಮುಹಮ್ಮದ್(63) ಸಹಿತ ನಾಲ್ಕು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಚ್ಚಂಬಳ ನಿವಾಸಿ ಅಬ್ದುಲ್ ಇರ್ಷಾದ್(34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನ.4ರಂದು ಘಟನೆ ನಡೆದಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ಮುಹಮ್ಮದ್ ಅವರನ್ನು ಅಬ್ದುಲ್ ಇರ್ಷಾದ್ ಹಾಗೂ ಸಹೋದರ ದಿಲ್ಶಾದ್ ಇರಿದು ಗಾಯಗೊಳಿಸಿದ್ದಾರೆ. ತಡೆಯಲು ಬಂದ ಎಸ್.ಎ.ಶರೀಫ್, ಸ್ನೇಹಿತರಾದ ಮುಹಮ್ಮದ್ ನವಾಸ್ ಹಾಗೂ ರಫೀಕ್ ಅವರಿಗೂ ಇರಿತದ ಗಾಯವುಂಟಾಗಿತ್ತು.
ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ಅಬ್ದುಲ್ ಇರ್ಷಾದ್‌ನನ್ನು ಕುಂಬಳೆ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸರ ತಂಡ ಆತನ ಮನೆಯಿಂದ ಬಂಧಿಸಿದೆ. ಅಬ್ದುಲ್ ಇರ್ಷಾದ್ 5 ಕೊಲೆಯತ್ನ ಸೇರಿದಂತೆ 10 ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.