ಪಣಂಬೂರು ದರೋಡೆ ಪ್ರಕರಣ ಮತ್ತೆ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು : ಪಣಂಬೂರುನಲ್ಲಿ ಜೂನ್‌ನಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ ದರೋಡೆ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿದೆ.

ಕೇರಳದ ಕಣ್ಣೂರು ಮೂಲದ ಮಿಥುನ್ ಲಾಲ್, ಶ್ರೀರಾಗ್, ಮಡಿಕೇರಿ ಮೂಲದ ಉಬೇದ್, ಜಿಯಾದ್ ಬಂಧಿತರು. ಈ ಪೈಕಿ ೀರಾಗ್ ಸ್ವತಃ ವಕೀಲರ ಮೂಲಕ ಮಂಗಳೂರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಮಿಥುನ್, ಉಬೇದ್ ಮತ್ತು ಜಿಯಾದ್ ಕೂಡ ವಕೀಲರ ಮೂಲಕ ಮಂಗಳೂರಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯುವುದಕ್ಕೆ ಮುಂದಾಗಿದ್ದರು. ಈ ವಿಚಾರ ತಿಳಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಂಧಿತ ಶ್ರೀರಾಗ್ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ ಪಕ್ಷದಲ್ಲಿ ಗುರುತಿಸಿಕೊಂಡಿದ್ದ.
ಕೃತ್ಯದಲ್ಲಿ ಬಳಕೆಯಾಗಿದ್ದ ಇನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, 10 ಗ್ರಾಮ್ ಚಿನ್ನದ ಉಂಗುರ ಹಾಗೂ ಜುವೆಲ್ಲರಿ ವ್ಯಾಪಾರಿಗೆ ಹಲ್ಲೆ ಮಾಡಲು ಬಳಸಿದ್ದ ಕಬ್ಬಿಣದ ರಾಡ್ ಕೂಡ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಸುಳಿವಿಲ್ಲ
ಈ ಪ್ರಕರಣದಲ್ಲಿ 13 ಮಂದಿ ಆರೋಪಿಗಳ ಫೋಟೋ ಸಹಿತ ಬಿಡುಗಡೆ ಮಾಡಿ ಇವರ ಪತ್ತೆಗೆ ಸಹಕಾರ ನೀಡುವಂತೆ ಮಂಗಳೂರು ಪೊಲೀಸರು ಕೇಳಿಕೊಂಡಿದ್ದರು. ಇದರಲ್ಲಿ ಶಿಜಿನ್ ಗಂಗಾಧರನ್ ಪ್ರಮುಖ ಆರೋಪಿಯೆಂದು ತೋರಿಸಿದ್ದರು. ಆದರೆ ಆತ ಇನ್ನೂ ಪತ್ತೆಯಾಗಿಲ್ಲ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ನಮಗೆ ಯಾವುದೇ ಚಿನ್ನವಾಗಲೀ, ಹಣವಾಗಲೀ ಸಿಕ್ಕಿಲ್ಲ ಎಂದಿದ್ದಾರೆ. ಒಂದು ಚಿನ್ನದ ಉಂಗುರ ಮಾತ್ರ ಸಿಕ್ಕಿದ್ದು ಅದನ್ನು ಆರೋಪಿಗಳು ಮಾರಾಟ ಮಾಡಿದಲ್ಲಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡೆ ನಡೆದ ಮರುದಿನವೇ ದರೋಡೆಯಾಗಿದ್ದ ಸ್ವ್‌ಟಿ ಡಿಸೈರ್ ಕಾರು ಬಂಟ್ವಾಳ ಬಳಿಯ ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಕಣ್ಣೂರು ಮೂಲದ ನಿಮಿಲ್ ಮತ್ತು ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ್ದಾರೆಂಬ ಆರೋಪದಲ್ಲಿ ಕೊಡಗು ಮೂಲದ ಇರ್ಕಾದ್ ಮತ್ತು ಮುಸ್ತಾ ಎಂಬವರನ್ನು ಅರೆಸ್ಟ್ ಮಾಡಲಾಗಿತ್ತು. ಸದ್ಯಕ್ಕೆ ಒಟ್ಟು ಏಳು ಮಂದಿ ಬಂಧನವಾಗಿದ್ದು ಇನ್ನೂ ಹಲವರು ಕತ್ಯದಲ್ಲಿ ಶಾಮೀಲಾದ ಶಂಕೆಯಿದ್ದು ಪೊಲೀಸರು ಶೋಧ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net