ಮಂಗಳೂರು ಮಾದಕ ವಸ್ತು ಸೇವನೆ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆ.6ರಂದು ಸಂಜೆ 6.10ರ ವೇಳೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಗ್ರೀನ್ ಗ್ರೌಂಡ್ ಬಳಿ ಅಮಲು ಪದಾರ್ಥ ಸೇವನೆ ನಶೆಯಲ್ಲಿದ್ದ ಸ್ಥಳೀಯರಾದ ಬೆಳ್ಮ ಗ್ರಾಮದ ಬರುವ ನಿವಾಸಿ ಸುಹೈಲ್ ಅಹಮ್ಮದ್ (22) ಮತ್ತು ಕಲ್ಲುಗುಡ್ಡೆ ಬೆಳ್ಮದೊಟ್ಟುವಿನ ಮಹಮ್ಮದ್ ನಾಸೀರ್ (21) ಎಂಬವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿದೆ.
ಆ.6ರಂದು ಸಂಜೆ 6.15ರ ವೇಳೆಗೆ ಅಶೋಕನಗರ ವೇಲ್ಸ್ ಪೇಟೆ ಬಳಿ ಸಿಗರೇಟ್ ಸೇದುತ್ತಿದ್ದ ಅಶೋಕನಗರದ ತಿಲಕ್ ರಾಜ್ (31) ಎಂಬಾತನನ್ನು ಉರ್ವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ಮಾದಕ ವಸ್ತು ಸೇವಿಸಿದ ಅಮಲಿನಲ್ಲಿ ಮಾತನಾಡಿದ್ದು, ಬಾಯಿ ತೊದಲುತ್ತಿತ್ತು. ಕೂಲಂಕಷವಾಗಿ ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಆ.6ರಂದು ಮಧ್ಯಾಹ್ನ 12.30ರ ವೇಳೆಗೆ ಬಂದರು ಠಾಣಾ ವ್ಯಾಪ್ತಿಯ ಗ್ರೀನ್ ಪಾರ್ಕ್ ಎಂಬಲ್ಲಿ ಮಾದಕ ವಸ್ತು ಸೇವನೆ ಮಾಡಿ ತೂರಾಡಿಕೊಂಡು ಹೋಗುತ್ತಿದ್ದ ಮರೋಳಿ ನಿವಾಸಿ ಧನುಷ್ ಎಂ. (23) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net