ಬಜಪೆ ಕೊಲೆ ಯತ್ನ ಪ್ರಕರಣ ನಾಲ್ವರು ಆರೋಪಿಗಳು ಅಂದರ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಹೊರ ವಲಯದ ಎಡಪದವು ಬಳಿ ಸೋಮವಾರ ತಲ್ವಾರ್ ನಿಂದ ಹಲ್ಲೆ ನಡೆಸಿ ಯುವಕನನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂದರು ನಿವಾಸಿ ಸಿನಾನ್ (22), ವೇಣೂರಿನ ಇರ್ಷಾದ್ (25), ವಾಮಂಜೂರಿನ ಸಾಹಿಲ್ ಅಕ್ರಂ (25) ಮತ್ತು ನಿಸಾನ್ (22) ಬಂಧಿತ ಆರೋಪಿಗಳು.
ವೇಣೂರಿನ ಪ್ರಶಾಂತ್ ಎಂಬಾತ ಆರೋಪಿಗಲ್ಲಿ ಒಬ್ಬನಾದ ಇರ್ಷಾದ್ ಗೆ ಹಣ ಕೊಡಲು ಬಾಕಿ ಇತ್ತು. ಹಣ ಕೊಡುವಂತೆ ಕರೆ ಮಾಡಿದಾಗ ಪ್ರಶಾಂತ್ ಕೊಡುವುದಿಲ್ಲ ಎಂದು ಹೇಳಿದ್ದ. ಕೊನೆಗೆ ಮೂಡುಬಿದಿರೆಗೆ ಬರುವಂತೆ ತಿಳಿಸಿದ್ದಾನೆ. ಅದರಂತೆ ಇರ್ಷಾದ್ ಇತರ ಮೂವರ ಜತೆ ಮೂಡುಬಿದಿರೆಗೆ ತೆರಳಿದ್ದಾರೆ. ಅಲ್ಲಿ ಪ್ರಶಾಂತ್ ಸಿಕ್ಕಿಲ್ಲ. ವಾಪಾಸು ಬರುವಾಗ ಇವರ ಕೈಯಲ್ಲಿ ತಲವಾರು ಇರುವುದನ್ನು ನೋಡಿ ಅಖಿಲೇಶ್ ವೀಡಿಯೋ ಮಾಡಿದ್ದಾರೆ. ಇದನ್ನು ನೋಡಿದ ಆರೋಪಿಗಳು ಎಡಪದವಿನಲ್ಲಿ ವಾಹನ ನಿಲ್ಲಿಸಿ ಗಲಾಟೆ ಮಾಡಿ ತಲವಾರು ಬೀಸಿದ್ದಾರೆ. ಇದರಿಂದ ಅಖಿಲೇಶ್ ಮೊಣಕೈಗೆ ಗಾಯವಾಗಿದೆ.
ಆರೋಪಿಗಳ ಪೈಕಿ ಸಾಹಿಲ್ ಅಕ್ರಂ ಮತ್ತು ನಿಸಾನ್ ನನ್ನು ಕಾವೂರು ಪೊಲೀಸರು ಬಂಧಿಸಿದ್ದು, ಅವರ ಬಳಿ ಗಾಂಜಾ ಪತ್ತೆಯಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net