ಸ್ಥಳೀಯ ಮಹಿಳೆಯರ ವ್ಯಕ್ತಿತ್ವ ರೂಪಿಸುವ ಕೇಂದ್ರ: ಯು.ಟಿ.ಖಾದರ್ ಶ್ಲಾಘನೆ

ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಸ್ಪೀಕರ್ ಯು.ಟಿ.ಖಾದರ್ ಶಿಲಾನ್ಯಾಸಗೈದರು.
ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಸ್ಪೀಕರ್ ಯು.ಟಿ.ಖಾದರ್ ಶಿಲಾನ್ಯಾಸಗೈದರು.
Published on

ಉಳ್ಳಾಲ: ಚೆಬ್ಬಕಟ್ಟೆ ಎನ್ನುವ ತೀರಾ ಗ್ರಾಮೀಣ ಭಾಗದಲ್ಲಿ 30 ವರ್ಷಗಳ ಹಿಂದೆಯೇ ಖಾಸಗಿ ಜಮೀನಿನಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಆಗಿದೆಯೆಂದರೆ ಅಂದು ಹಿರಿಯರು, ಸ್ಥಳೀಯರು ಶಿಕ್ಷಣಕ್ಕೆ ನೀಡಿದ್ದ ಮಹತ್ವ ತೋರಿಸುತ್ತದೆ. ಅಂಗನವಾಡಿ ಎಂದರೆ ಕೇವಲ ಮಕ್ಕಳ ಕೇಂದ್ರವಲ್ಲ, ಸ್ಥಳೀಯ ಪ್ರದೇಶದ ಮಹಿಳೆಯರ ವ್ಯಕ್ತಿತ್ವ ರೂಪಿಸುವ ಕೇಂದ್ರವೂ ಆಗಿದೆ. ಇಲ್ಲಿ ನರ್ಸರಿ ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕ ವ್ಯವಸ್ಥೆಯಿಂದ ಕೂಡಿ ಕಟ್ಟಡ ನಿರ್ಮಾಣ ಅಗತ್ಯ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನರಿಂಗಾನ ಗ್ರಾಮದ ಚೆನ್ನಕಟ್ಟ ಎಂಬಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಗ್ರಾಪಂ ಸದಸ್ಯರಾದ ರಹ್ಮಾನ್ ಚಂದಹಿತ್ಲು, ಮುರಳೀಧರ ಶೆಟ್ಟಿ, ಶೇಖಬ್ಬ ನರಿಂಗಾನ, ಸುನಿತಾ ಡಿಸೋಜ, ಹರೇಕಳ ಗ್ರಾಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸ್ಥಳೀಯರಾದ ಇನಾಸ್ ಡಿಸೋಜ, ಸ್ಥಳದಾನಿ ಬಶೀರ್ ಅಲ್ತಬೆಟ್ಟು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮೊಹ್ಸಿನಾ, ಅಂಗನವಾಡಿ ಮೇಲ್ವಿಚಾರಕಿ ಮುಬೀನಾ, ಅಂಗನವಾಡಿ ಶಿಕ್ಷಕಿ ಅಶ್ವಿನಿ ರೈ ಮೊದಲಾದವರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಲತೀಫ್ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net