ಮಹಿಳೆಯರ ನಡುವೆ ಆತ್ಮೀಯತೆ, ಒಗ್ಗಟ್ಟು ವೃದ್ಧಿ

ಆರೋಗ್ಯ ಮಾಹಿತಿ ಕಾರ್ಯಾಗಾರ
ಕೆರ್ಗಾಲ್‌ನ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಅರಿಶಿಣ ಕುಂಕುಮ, ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ರಾಮಚಂದ್ರ ದೇವಾಡಿಗ ಉದ್ಘಾಟಿಸಿದರು. ಪ್ರಮುಖರಾದ ಗಿರಿಜಾ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ ಮತ್ತಿತರರಿದ್ದರು.
ಕೆರ್ಗಾಲ್‌ನ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಅರಿಶಿಣ ಕುಂಕುಮ, ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ರಾಮಚಂದ್ರ ದೇವಾಡಿಗ ಉದ್ಘಾಟಿಸಿದರು. ಪ್ರಮುಖರಾದ ಗಿರಿಜಾ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ ಮತ್ತಿತರರಿದ್ದರು.
Published on: 

ಬೈಂದೂರು: ಅರಿಶಿಣ ಕುಂಕುಮ ಮಹಿಳೆಯರಿಗೆ ಸೌಭಾಗ್ಯದ ಸಂಕೇತವಾಗಿದ್ದು, ನಮ್ಮ ಹಿಂದೂ ಸಮಾಜದಲ್ಲಿ ಯಾರಾದರೂ ಅರಿಶಿಣ ಕುಂಕುಮ ಕಾರ್ಯಕ್ರಮ ಆಯೋಜಿಸಿ ಆಹ್ವಾನಿಸಿದಾಗ ಮಹಿಳೆಯರು ಭಾಗವಹಿಸುತ್ತಾರೆ. ಇಂತಹ ಕಾರ್ಯಕ್ರಮಗಳು ಮಹಿಳೆಯರ ನಡುವೆ ಆತ್ಮೀಯತೆ ಹಾಗೂ ಒಗ್ಗಟ್ಟನ್ನು ಬಲಪಡಿಸುತ್ತವೆ ಎಂದು ಬೈಂದೂರು ವಲಯದ ದೇವಾಡಿಗ ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ದೇವಾಡಿಗ ಹೇಳಿದರು.

ಕೆರ್ಗಾಲ್‌ನ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ ಅರಿಶಿಣ ಕುಂಕುಮ ಹಾಗೂ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸೌಪರ್ಣಿಕಾ ಮಹಿಳಾ ಸಹಕಾರಿ ಸಂ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿದರು. ಸಂಘದ ಅಧ್ಯಕ್ಷ ರಾಮಚಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸೇವಾ ಅಧಿಕಾರಿ ಅನಿಸ್ಕರಿಯಾ ಅವರು ಮಹಿಳೆಯರಿಗೆ ಆರೋಗ್ಯ ಮಾಹಿತಿ ನೀಡಿದರು.

ಸಂಗದ ಗೌರವಾಧ್ಯಕ್ಷ ರವೀಂದ್ರ ಎಚ್.ದೇವಾಡಿಗ, ಮಹಿಳಾ ಘಟಕ ಕಾರ್ಯದರ್ಶಿ ಸೀತಾ ದೇವಾಡಿಗ ಮಹಾಬಲೇಶ್ವರ, ಉಪಾಧ್ಯಕ್ಷರಾದ ಸೀತು ದೇವಾಡಿಗ ಮೂರ್ತಿಮನೆ, ಸವಿತಾ ದೇವಾಡಿಗ ಕೋಣ್ಕಿಮನೆ ಉಪಸ್ಥಿತರಿದ್ದರು. ರಾಧಾ ದೇವಾಡಿಗ ಸ್ವಾಗತಿಸಿದರು. ನರಸಿಂಹ ದೇವಾಡಿಗ ನಿರೂಪಿಸಿದರು. ರೇವತಿ ದೇವಾಡಿಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net