

ಮೂಡುಬಿದಿರೆ: ಆಹಾರ ಕೇವಲ ಉದರ ಪೋಷಣೆಯ ಸಾಧನವಲ್ಲ, ಆರೋಗ್ಯದ ಆಧಾರ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಬದುಕಿನ ಶಿಸ್ತಿನ ದ್ಯೋತಕ. ಆಹಾರ ಸೇವನೆಯಲ್ಲಿ ವಿವೇಕ, ದೈನಂದಿನ ವ್ಯವಹಾರಗಳಲ್ಲಿ ಸಮತೋಲನ ಇರಬೇಕು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.
ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ಆಹಾರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿ, ಖ್ಯಾತ ಕಂಟೆಂಟ್ ಕ್ರಿಯೇಟರ್ ಲಕ್ಷ್ಮೀ ಶೆಣೈ ಉದ್ಘಾಟಿಸಿ, ಯುವಜನತೆ ಸಾಂಪ್ರದಾಯಿಕ ಆಹಾರ ಪದ್ಧತಿಗಳತ್ತ ಒಲವು ತೋರುತ್ತಿರುವುದು ಸಂತಸದ ಸಂಗತಿ. ಆಹಾರದ ರುಚಿಯನ್ನು ಆಸ್ವಾದಿಸಿ ಹಸಿವು ತೃಪ್ತಿಪಡಿಸಿಕೊಳ್ಳುವುದರೊಂದಿಗೆ ಆಹಾರದ ಬಗ್ಗೆ ಗೌರವವಿರಬೇಕು ಎಂದರು.
ಕಂಟೆಂಟ್ ಕ್ರಿಯೇಟರ್ ಸುಶಾನ್ ಎ.ಜೆ. ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಶುದ್ಧ ಆಹಾರ ಮತ್ತು ಶುದ್ಧ ಮನಸ್ಸಿನ ಮಹತ್ವ ಪ್ರತಿಪಾದಿಸಿದರು. ಅತಿಥಿಗಳಾಗಿ ಸೌರವ್ ಸುದರ್ಶನ್ ಜೈನ್, ಪ್ರಿಯಾ ಕ್ವೀನಿ ರೋಡ್ರಿಗಸ್, ಜನಾರ್ದನ್, ರಮ್ಯಾ ಎಸ್.ಭಟ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಸುನಾದ್ ರಾಜ್ ಜೈನ್, ಅಧ್ಯಾಪಕ ಜಯಶೀಲ್ ಭಾಗವಹಿಸಿದ್ದರು. ಮೌಲ್ಯ ವೈ.ಆರ್.ಜೈನ್ ಅತಿಥಿಗಳನ್ನು ಪರಿಚಯಿಸಿದರು. ಆರಾಧ್ಯ ಸ್ವಾಗತಿಸಿದರು. ತನು ನಿರೂಪಿಸಿದರು.