ಚತ್ತೀಸ್ ಘಡ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್(33) ಮೃತ ಮೀನುಗಾರ. ವರ್ಷದ ಹಿಂದೆ ಮಂಗಳೂರಿಗೆ ಬಂದು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ಸೋಮವಾರ ರಾತ್ರಿ 11 ಗಂಟೆ ಹೊತ್ತಿಗೆ ಹಳೇ ಬಂದರ್ ಉಪ್ಪುಧಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ‘ಹಸನ್ ಅಲ್ ಬಹಾರ್’ ಪರ್ಸಿನ್ ಬೋಟಿನ ಹಗ್ಗ ಕಟ್ಟುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ.