

ಉಪ್ಪಿನಂಗಡಿಯಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಟಕ ಇಲ್ಲದಿರುವುದರಿಂದ ತ್ಯಾಜ್ಯ ನೀರೆಲ್ಲಾ ನದಿಯ ಒಡಲು ಸೇರುವುದು ಅನಿವಾರ್ಯವಾಗಿದೆ. ಈ ಸಂದರ್ಭ ನದಿಯಲ್ಲಿನ ಮೀನುಗಳೇ ನದಿ ನೀರಿನ ಸ್ವಚ್ಛತೆಗೆ ಆಶಾಕಿರಣವಾಗಿದ್ದು, ಅದರ ರಕ್ಷಣೆ ಪ್ರಸಕ್ತ ಸ್ಥಿತಿಯಲ್ಲಿ ಅಗತ್ಯ. ಈ ಕಾರಣದಿಂದಾಗಿ ಕಳೆದ ಬಾರಿಯಂತೆ ಈ ಬಾರಿಯೂ ನದಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲು ಪಂಚಾಯಿತಿ ಆಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ.
ಧಾರ್ಮಿಕವಾಗಿ, ಪ್ರಾಕೃತಿಕವಾಗಿ ಮಹತ್ವ ಪಡೆದಿರುವ ಉಭಯ ನದಿಗಳ ಸಂಗಮ ತಾಣ ಉಪ್ಪಿನಂಗಡಿಯಲ್ಲಿ ನದಿ ನೀರಿನ ವಾಲಿನ್ಯ ತಡೆಯಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ನದಿ ಒಡಲಿನಿಂದ ಸಾರಾಸಗಟಾಗಿ ಮೀನುಗಳನ್ನು ದೋಚುವುದು ನದಿ ನೀರಿನ ಶುದ್ಧತೆಯ ವಿಚಾರದಲ್ಲಿ ದುಷ್ಪರಿಣಾಮ ಬೀರಲಿದೆ.