ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಾಲಕಿಗೆ ಮರುಜನ್ಮ

 ಮಕ್ಕಳ ಯಶಸ್ವಿ ರೊಬೊಟಿಕ್ ಲಿವರ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ತಂಡ.
ಮಕ್ಕಳ ಯಶಸ್ವಿ ರೊಬೊಟಿಕ್ ಲಿವರ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ತಂಡ.
Published on
ಲಿವರ್ ಟ್ಯೂಮರ್‌ಗೆ ಸಂಬಂಧಿಸಿ ಬಾಲಕಿಯೊಬ್ಬಳಿಗೆ ನಿಟ್ಟೆ ವಿವಿ ಅಧೀನದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಗೊಳಪಟ್ಟ ಆಸ್ಪತ್ರೆಯಲ್ಲಿ ಮಕ್ಕಳ ರೊಬೊಟಿಕ್ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸುವ ಮೂಲಕ ಬಾಲಕಿಗೆ ಮರುಜನ್ಮ ನೀಡಲಾಗಿದೆ. ಕರಾವಳಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಾಧನೆ ಇದಾಗಿದೆ.
ಬಡ ಕುಟುಂಬದ ಹದಿನಾಲ್ಕು ವರ್ಷದ ಬಾಲಕಿಗೆ ಕಿಬ್ಬೊಟ್ಟೆಯ ನೋವು ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿತ್ತು. ವೈದ್ಯಕೀಯ ತಂಡ ಬಾಲಕಿಯ ಯಕೃತ್ತಿನ ಕಾಡೇಟ್ ಲೋಬ್‌ನಲ್ಲಿ ದೊಡ್ಡ ಗಾತ್ರದ ಗೆಡ್ಡೆ (ಲಿವರ್ ಟ್ಯೂಮರ್) ಇರುವುದನ್ನು ಪತ್ತೆ ಹಚ್ಚಿತು. ಇಂಥ ಗೆಡ್ಡೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಒಡೆದು ನಿಯಂತ್ರಿಸಲಾಗದ ರಕ್ತಸ್ರಾವ ಉಂಟಾಗುವ ಅಪಾಯದ ಬಗ್ಗೆ ವೈದ್ಯರು ಬಾಲಕಿ ಮನೆಯವರಿಗೆ ತಿಳಿಸಿದ್ದರು.
ಗೆಡ್ಡೆ, ವೆನಾ ಕ್ಯಾವಾ ಸೇರಿದಂತೆ ಪ್ರಮುಖ ರಕ್ತನಾಳಗಳ ಸಮೀಪದಲ್ಲಿದ್ದರಿಂದ ತೆರೆದ ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿಯಾಗಿದ್ದ ಹಿನ್ನೆಲೆ ವೈದ್ಯರು, ಮಕ್ಕಳ ಶಸ್ತ್ರಚಿಕಿತ್ಸಾ ತಂಡ, ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ಹಾಗೂ ಹೆಪಾಟೋ-ಪ್ಯಾಂಕ್ರಿಯಾಟೋ- ಬಿಲಿಯರಿ *(ಏಆ) ತಜ್ಞರ ಸಹಯೋಗದಲ್ಲಿ ‘ರೋಬಾಟಿಕ್ ಅಸಿಸ್ಟೆಡ್ ಲಿವರ್ ರಿಸೆಕ್ಷನ್’ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು.
ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗಿಂತ ರೋಬಾಟಿಕ್ ಶಸ್ತ್ರಚಿಕಿತ್ಸೆ ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಜಠರ, ಮೂತ್ರಕೋಶ, ಸ್ತ್ರೀರೋಗ ಹಾಗೂ ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆ ಹೆಚ್ಚಿನ ನಿಖರತೆಯಿಂದ ನಡೆಸಲು ಸಹಕಾರಿಯಾಗಿದ್ದು, ವೇಗವಾಗಿ ಚೇತರಿಕೆ ಹಾಗೂ ಕಡಿಮೆ ನೋವಿನಿಂದ ಕೂಡಿರುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

11ಗಂಟೆಗಳ ಶಸ್ತ್ರಚಿಕಿತ್ಸೆ!

ಐದೇ ದಿನದಲ್ಲಿ ಚೇತರಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net