ಪರಿಶುದ್ಧ ಭಕ್ತಿಯಿಂದ ಭಗವಂತನ ಅನುಗ್ರಹ ಪ್ರಾಪ್ತಿ : ಶ್ರೀ ವಿಶ್ವಪ್ರಸ್ರಸನ್ನ ತೀರ್ಥ ಸ್ವಾಮೀಜಿ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪ್ರಮುಖರಾದ ಡಾ.ನಾಗರಾಜ ಪಾತೂರಿ, ಎಚ್.ಸತ್ಯನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪ್ರಮುಖರಾದ ಡಾ.ನಾಗರಾಜ ಪಾತೂರಿ, ಎಚ್.ಸತ್ಯನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Published on
ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿಗಳ 47ನೇ ಘಟಿಕೋತ್ಸವ ಸುಧಾಮಂಗಲ ವಿಶ್ವ ಸಂಭ್ರಮ ಕಾರ್ಯಕ್ರಮದಲ್ಲಿ ನವದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯ, ಸುಬ್ರಹ್ಯಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರಗಳ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ವಿದ್ವತ್ ಸಮ್ಮೇಳನದ ಪ್ರಥಮ ಅಧಿವೇಶನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅನುಭವ ಸಂಪಾದನೆ ಮಾಡಿ ಅದನ್ನು ಜಗತ್ತಿಗೆ ಪಸರಿಸಬೇಕು. ಸುಬ್ರಹ್ಮಣ್ಯ ಮಠ ಗುರು ಮಠವಾಗಿದೆ. ಜ್ಞಾನ ಸಂಪತ್ತು ಎನ್ನುವುದು ಭಗವಂತನ ಆಶೀರ್ವಾದ. ಆದುದರಿಂದ ತಾವು ಸಂಪಾದಿಸಿದ ಜ್ಞಾನವನ್ನು ಸರ್ವರಿಗೂ ತಲುಪಿಸುವಂತೆ ಮಾಡಬೇಕು. ಭಗವಂತನ ಆಶೀರ್ವಾದ ಪಡೆಯಲು ಭಕ್ತಿಪೂರ್ವಕವಾದ ಆರಾಧನೆ ಅಗತ್ಯ. ಗುರುಗಳ ಬಗ್ಗೆ ಭಕ್ತಿ ಹೊಂದಿರುವುದು ಕೂಡ ದೇವರಿಗೆ ಪ್ರಿಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net