

ಮಂಗಳೂರು: ನಗರದ ಪಡೀಲ್‌ನ ಕಾರು ಶೋರೂಂವೊಂದರಲ್ಲಿ ಹಠಾತ್ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.
ಪಡೀಲ್ ಡಿ.ಸಿ. ಕಚೇರಿ ಮುಂಭಾಗದಲ್ಲಿರುವ ಕಾರು ಶೋ ರೂಂನಲ್ಲಿ ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಹಠಾತ್ ಹೊಗೆ ಕಾಣಿಸಿಕೊಂಡು ಇಡೀ ಶೋರೂಂ ಆವರಿಸಿದೆ.
ನೋಡನೋಡುತ್ತಿದ್ದ ಬೆಂಕಿಯ ಕೆನ್ನಾಲಗೆ ಇಡೀ ಶೋರೂಂಗೆ ಆವರಿಸಿದ್ದು, ಅದರೊಳಗಿದ್ದ ಕಾರುಗಳಿಗೆ ಭಾರೀ ಹಾನಿಯಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಶೋರೂಂನಲ್ಲಿ ಬೆಂಕಿ ವ್ಯಾಪಿಸಿ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.