

ಕಾಸರಗೋಡು: ಬದಿಯಡ್ಕ ಪೇಟೆಯ ಕಟ್ಟಿಗೆ, ಗೋಣಿ ಸೇರಿದಂತೆ ವಿವಧ ಸಾಮಗ್ರಿ ದಾಸ್ತಾನಿರಿಸಿದ್ದ ಗೋದಾಮು ಬೆಂಕಿಗಾಹುತಿಯಾಗಿದ್ದು, ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿ.ಮುಹಮ್ಮದ್ ಕಾಂತಲ ಎಂಬುವರ ವಾಲಿಕತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣೆ ಸಮೀಪದಲ್ಲಿ ಕಾರ್ಯಾಚರಿಸುವ ಕಟ್ಟಿಗೆ ಡಿಪೋದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೋಣಿ ಚೀಲಗಳು, ಗೂಡ್ಸ್ ಆಟೋ, ಕಟ್ಟಿಗೆ ಉರಿದು ಹೋಗಿ ಸುವಾರು 20 ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಗೋದಾಮಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಕಾಸರಗೋಡಿನಿಂದ ಬಂದ ಎರಡು ಟಕ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ಶಮನಗೊಳಿಸಿದರು. ಗೋದಾಮಿಗೆ ಬೆಂಕಿ ಹಚ್ಚಿದ ಶಂಕಿತ ವ್ಯಕ್ತಿಯ ಚಲನವಲನದ ದೃಶ್ಯ ಸಮೀಪದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್ ತಂಡ ಸ್ಥಳ ಪರಿಶೀಲಿಸಿತು.
ಕಾಸರಗೋಡು: ರೈಲಿನಲ್ಲಿ ಚಾರ್ಜ್‌ಗೆ ಇರಿಸಿದ್ದ ಐಫೋನ್ ಕಳವಾಗಿಗಿರುವ ಬಗ್ಗೆ ಬೇಕಲಕುನ್ನು ಹದ್ದಾದ್‌ನಗರ ಶಿಫಾನ ಮಂಜಿಲ್‌ನ ಅಫ್ನಾಸ್ (23) ಎಂಬುವರು ದೂರು ನೀಡಿದ್ದಾರೆ. ತಿರುವನಂತಪುರದಿಂದ ಮಂಗಳೂರಿಗೆ ತೆರಳುವ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಫ್ನಾಸ್ ಪ್ರಯಾಣಿಸುತ್ತಿದ್ದರು. ರೈಲು ತಿರೂರಿಗೆ ತಲುಪಿದಾಗ ಚಾಜಿರ್ಂಗ್ ಪೋರ್ಟಲ್‌ನಲ್ಲಿ ಐಫೋನ್ ಚಾರ್ಜ್‌ಗಿಟ್ಟು ನಿದ್ರೆ ವಾಡಿದ್ದರು. ರೈಲು ಕಾಞಂಗಾಡ್‌ಗೆ ತಲುಪಿದಾಗ ಎಚ್ಚರಗೊಂಡು ನೋಡಿದಾಗ ಫೋನ್ ನಾಪತ್ತೆಯಾಗಿತ್ತು. ಈ ಕುರಿತು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮೂವರಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯೊಬ್ಬನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅಂಬಲತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಆಟ್ಟಿಂಗಾನ ವೆಳ್ಳಮುಂಡ ಎಂಬಲ್ಲಿನ ಶರತ್ ಎಂಬುವರ ಮನೆಗೆ ಬೆಂಕಿ ಹಚ್ಚಲಾಗಿದೆ. ಅಂಬಲತ್ತರ ಠಾಣೆ ಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮನೆ ಬೆಂಕಿ ಗಾಹುತಿಯಾಗಿರುವ ವಿಷಯ ಗಮನಕ್ಕೆ ಬಂದಿದೆ. ಸೆ.28ರಂದು ಶರತ್ ನೆರೆಮನೆಗೆ ನುಗ್ಗಿ ದಂಪತಿ ಸಹಿತ ಮೂವರಿಗೆ ಇರಿದು ಗಾಯಗೊಳಿಸಿದ್ದನು. ಅಂಬಲತ್ತರ ಠಾಣೆ ಪೊಲೀಸರು ಶರತ್ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದರು. ನ್ಯಾಯಾಲಯದ ನಿರ್ದೇಶನಂತೆ ಶರತ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಪ್ರಕರಣದ ಬಳಿಕ ಶರತ್‌ನ ಮನೆಗೆ ಬೀಗ ಜಡಿಯಲಾಗಿತ್ತು.
ಕಾಸರಗೋಡು: ಬಾಯಾರು ಸಮೀಪದ ಬಳ್ಳೂರು ತೆಂಕಮಜಲು ನಿವಾಸಿ ಮೋಹನ ನಾಯ್ಕ (50) ಎಂಬುವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮನೆಯಿಂದ ತೋಟಕ್ಕೆ ತೆರಳಿದ್ದ ಅವರು ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮನೆ ಸಮೀಪದ ತೋಟದ ಕೆರೆ ಬಳಿ ಚಪ್ಪಲಿ ಕಂಡುಬಂದಿದೆ. ಉಪ್ಪಳದಿಂದ ಬಂದ ಅಗ್ನಿಶಾಮಕದಳ ಹುಡುಕಾಡಿದಾಗ ಕೆರೆಯಲ್ಲಿ ಶವ ಪತ್ತೆಯಾಗಿದೆ. ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪೋ ಬಸ್‌ನಲ್ಲಿ ತಾತ್ಕಾಲಿಕ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.