ಕೀರ್ತಿನಗರದಲ್ಲಿ ಆಕಸ್ಮಿಕ ಬೆಂಕಿ

ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ 5ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿ ತೆಂಗಿನ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಾಪಕ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ 5ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿ ತೆಂಗಿನ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಾಪಕ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
Published on
ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ದುರ್ಘಟನೆಯಲ್ಲಿ ಅನೇಕ ಮರ ಗಿಡಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸಮೀಪದ ತೆಂಗಿನ ತೋಟಕ್ಕೂ ಬೆಂಕಿ ಆವರಿಸಿಕೊಂಡಿದೆ. ತೋಟದ ಬಹುಭಾಗಕ್ಕೆ ಹಾನಿಯಾಗಿದೆ.
ರಾತ್ರಿ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net