ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಕೇರಳ ರಾಜ್ಯದಲ್ಲಿ ಜಿಎಸ್‌ಟಿ ಸೇರಿದಂತೆ ಸುಮಾರು 4,000 ರೂಪಾಯಿಗೆ ಸಿಗುವ ಪ್ಯಾನಿಕ್ ಬಟನ್ ಸಾಧನಕ್ಕೆ ಕರ್ನಾಟಕದಲ್ಲಿ ಅಕ್ರಮವಾಗಿ 13,500 ರಿಂದ 16,000 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆಯು ಉಚ್ಚ ನ್ಯಾಯಾಲಯಕ್ಕೆ ಈ ಸಾಧನದ ಬೆಲೆ 8,250 ರೂಪಾಯಿ ಎಂದು ಮಾಹಿತಿ ನೀಡಿದ್ದರೂ, ವಾಸ್ತವದಲ್ಲಿ ಖಾಸಗಿ ಕಂಪನಿಗಳು ದುಪ್ಪಟ್ಟು ಹಣ ಪಡೆಯುತ್ತಿವೆ. ಇಷ್ಟು ದೊಡ್ಡ ಮೊತ್ತ ಪಡೆದರೂ ಕಂಪನಿಗಳು ಚಾಲಕರಿಗೆ ಯಾವುದೇ ಅಧಿಕೃತ ಬಿಲ್ ನೀಡಲು ನಿರಾಕರಿಸುತ್ತಿವೆ ಎಂದು ಅವರು ದೂರಿದರು.