ಆಟದಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ FIDE Chess

ಅಂತಾರಾಷ್ಟ್ರೀಯಮಟ್ಟದ ಫಿಡೆ ಓಪನ್ ರಾಪಿಡ್ ಚೆಸ್ ಟೂರ್ನಮೆಂಟನ್ನು ವಿವೇಕಾನಂದ ಕಾಲೇಜ್ ಆಪ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜೀಸ್ ಸಂಚಾಲಕ ಟಿ.ಎಸ್.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಪ್ರಮುಖರಾದ ಸತ್ಯಲತಾ ರೈ, ಲಕ್ಷ್ಮೀಕಾಂತ ಬಿ.ಆಚಾರ್ಯ, ಶ್ರೀಶಾ ಕೆ. ಮೊದಲಾದವರಿದ್ದರು.
ಅಂತಾರಾಷ್ಟ್ರೀಯಮಟ್ಟದ ಫಿಡೆ ಓಪನ್ ರಾಪಿಡ್ ಚೆಸ್ ಟೂರ್ನಮೆಂಟನ್ನು ವಿವೇಕಾನಂದ ಕಾಲೇಜ್ ಆಪ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜೀಸ್ ಸಂಚಾಲಕ ಟಿ.ಎಸ್.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಪ್ರಮುಖರಾದ ಸತ್ಯಲತಾ ರೈ, ಲಕ್ಷ್ಮೀಕಾಂತ ಬಿ.ಆಚಾರ್ಯ, ಶ್ರೀಶಾ ಕೆ. ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿ.ಎಸ್.ಸುಬ್ರಹ್ಮಣ್ಯ ಭಟ್ ಅಭಿಪ್ರಾಯ
  • ಫಿಡೆ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಉದ್ಘಾಟನೆ
ಪುತ್ತೂರು: ಚದುರಂಗಕ್ಕೆ ಶತಮಾನದ ಇತಿಹಾಸವಿದ್ದು, ಚಾಕಚಕ್ಯತೆಯಿಂದ ನಡೆಯುವ ಆಟ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಯುದ್ಧ ಸಮಯದಲ್ಲೂ ಚದುರಂಗದ ನಡೆಗಳು ಬಳಕೆಯಾಗುತ್ತವೆ. ಆಟಗಳಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ವಿವೇಕಾನಂದ ಕಾಲೇಜ್ ಆ- ಇಂಜಿನಿಯರಿಂಗ್ ಆಂಡ್ ಟೆಕ್ನಾಲಜೀಸ್ ಸಂಚಾಲಕ ಟಿ.ಎಸ್.ಸುಬ್ರಹ್ಮಣ್ಯ ಭಟ್ ಹೇಳಿದರು.
ಇಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ವತಿಯಿಂದ ವಿವೇಕಾನಂದ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅಂತಾರಾಷ್ಟ್ರೀಯಮಟ್ಟದ ಫಿಡೆ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್- ೨೦೨೬ ಉದ್ಘಾಟಿಸಿ ಮಾತನಾಡಿದರು.
ಅಸೋಸಿಯೇಷನ್ ಅಧ್ಯಕ್ಷೆ ಸತ್ಯಲತಾ ರೈ ಅಧ್ಯಕ್ಷತೆ ವಹಿಸಿದ್ದರು. ಅಂಗವಿಕಲತೆ ನಡುವೆ ವಿಶೇಷ ಸಾಧನೆ ಮಾಡಿದ ಯಶಸ್ವಿ ಕೆ. ಅವರನ್ನು ಅಭಿನಂದಿಸಲಾಯಿತು.
ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮೀಕಾಂತ ಬಿ.ಆಚಾರ್ಯ, ಕರ್ಣಾಟಕ ಪುತ್ತೂರು ಬ್ಯಾಂಕ್ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಶ್ರೀಶಾ ಕೆ., ಕಾಲೇಜು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ., ಅಸೋಸಿಯೇಷನ್ ಕಾರ್ಯದರ್ಶಿ ದಾಮೋಧರ ಕಣಜಾಲು, ಕೋಶಾಽಕಾರಿ ಡಾ.ಎಸ್.ಎಂ.ಪ್ರಸಾದ್, ರಾಜೇಶ್ ಕೃಷ್ಣ ಪ್ರಸಾದ್ ಮತ್ತಿತರರಿದ್ದರು.
ಅಸೋಸಿಯೇಷನ್ ಸಂಚಾಲಕಿ ಉಮಾ ಪ್ರಸನ್ನ ಸ್ವಾಗತಿಸಿದರು. ಸಂಹಿತಾ ಶರ್ಮ ಪ್ರಾರ್ಥಿಸಿದರು. ದಿನೇಶ್ ಪ್ರಸನ್ನ ಪ್ರಸ್ತಾವನೆಗೈದರು. ಸೀಮಾ ಶರ್ಮ ಅಭಿನಂದನಾ ಪತ್ರ ವಾಚಿಸಿದರು. ಪಂಚಮಿ, ದೀಕ್ಷಾ ಪಾರ್ವತಿ ನಿರೂಪಿಸಿದರು. ಸೂರ್ಯ ಶಂಕರ ಭಟ್ ವಂದಿಸಿದರು.
"

ಚೆಸ್ ಮಿದುಳನ್ನು ಚುರುಕುಗೊಳಿಸುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆಟದ ರಾಯಭಾರಿಗಳಾದ ಪ್ರತಿಯೊಬ್ಬರಿಗೂ ಅವರದೇ ಆದ ಜವಾಬ್ದಾರಿಗಳಿವೆ. ಬಾಲ್ಯದಲ್ಲೇ ಚದುರಂಗ ಆಟಕ್ಕೆ ಮನೆಯಲ್ಲಿ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net