ವಿದ್ಯಾರ್ಥಿ ಪ.ಜಾತಿಗೆ ಸೇರಿದ್ದು, ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಸ್ಟೀವನ್ ಮೊಂತೇರೋ ವೀಡಿಯೋ ಮಾಡುತ್ತಾ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಅಲ್ಲಿಂದ ತೆರಳಿದ್ದಾಳೆ. ಅನಂತರ ಇನ್ನೋರ್ವ ಆರೋಪಿ ಅವಿಲ್ ಎಂಬಾತ ಕಿರಣ್ ನನ್ನು ತಡೆದು ನಿಲ್ಲಿಸಿ, ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿ, ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ್ದಾನೆ. ಸ್ಟೀವನ್ ಕೂಡಾ ಬೆದರಿಕೆಯೊಡ್ಡಿದ್ದಾನೆ. ಮಾತ್ರವಲ್ಲದೆ ಜಾತಿ ವಿಚಾರ ತೆಗೆದು ಜಾತಿ ನಿಂದನೆ ಮಾಡಿದ್ದಾನೆ. ಬಳಿಕ ಆ ವೀಡಿಯೋವನ್ನು ವೈರಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.