ಸಮಾಜದಲ್ಲಿ ಬದುಕುವುದನ್ನು ಕಲಿಸುವುದೇ ಶಿಕ್ಷಣ : ಕೆ.ಎನ್.ಆಳ್ವ ಅಭಿಪ್ರಾಯ

 ಮುಖ್ಯಶಿಕ್ಷಕ ರಾಧಕೃಷ್ಣ ರೈ ಮತ್ತು ಶಿಕ್ಷಕಿ ಕುಮುದಾ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ರಾಧಕೃಷ್ಣ ರೈ ಮತ್ತು ಶಿಕ್ಷಕಿ ಕುಮುದಾ ಅವರನ್ನು ಸನ್ಮಾನಿಸಲಾಯಿತು.
Published on

ಉಳ್ಳಾಲ: ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದು ಮಾತ್ರ ಅಧ್ಯಾಪಕರ ಕೆಲಸವಲ್ಲ, ಪಾಠದೊಂದಿಗೆ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಯಾವ ರೀತಿ ಬದುಕಬೇಕೆಂಬುದನ್ನು ಕಲಿಸಿಕೊಡುವ ಜವಾಬ್ದಾರಿಯೂ ಇದೆ ಎಂದು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೆ.ಎನ್.ಆಳ್ವ ಅಭಿಪ್ರಾಯಪಟ್ಟರು.

ಪಾವೂರು-ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ನಿವೃತ್ತಿ ಹೊಂದಿದ ಅನುದಾನಿತ ಹಿ.ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಧಕೃಷ್ಣ ರೈ ಮತ್ತು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಶಿಕ್ಷಕಿ ಕುಮುದಾ ಅವರನ್ನು ಬೀಳ್ಕೊಡಲಾಯಿತು.

ಜಂಟಿ ಸಂಸ್ಥೆಗಳ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ, ಮಂಗಳೂರು ತಾಲೂಕು ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಶಾಲಾಡಳಿತ ಮಂಡಳಿ ಕೋಶಾಧಿಕಾರಿ ಪೋಡಾರು ಜಯರಾಮ ಆಳ್ವ, ಸದಸ್ಯ ದುರ್ಗಾಪ್ರಸಾದ್ ರೈ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಲಿಲ್ಲಿ ಪಾಯ್ಸ, ನಿವೃತ್ತ ಮುಖ್ಯಶಿಕ್ಷಕರಾದ ಗಣಪ ಶೆಟ್ಟಿ, ನಾಥನಿಯಲ್ ಎಡ್ವಾರ್ಡ್ ಐಮನ್, ನಿವೃತ್ತ ಶಿಕ್ಷಕರಾದ ಸುಮಲತಾ, ಲಕ್ಷ್ಮೀ, ಎವುಜಿನ್, ಸುಗುಣ, ಪ್ರೌಢಶಾಲೆ ಮುಖ್ಯಶಿಕ್ಷಕಿ ಮೋಹಿನಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪ್ರೇಮಲತಾ ಹರೀಶ್, ಬಾಲಕೃಷ್ಣ ನಾಯ್ಕ, ರವಿಕಲಾ, ದಿವಾಕರ್ ಭಂಡಾರಿ ಉಪಸ್ಥಿತರಿದ್ದರು.

ಪ್ರೌಢಶಾಲಾ ಶಿಕ್ಷಕ ಕೃಷ್ಣಶಾಸ್ತ್ರಿ ಸ್ವಾಗತಿಸಿ. ಶಿಕ್ಷಕಿಯರಾದ ಉಷಾ ಮತ್ತು ಸ್ಮಿತಾ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ಶಿವಕುಮಾರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net