ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳ

ನೇಗಿಲು ಕಿರಿಯ, ಸಬ್ ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆ
 ಒಂಟಿಕಟ್ಟೆಯ ಕೋಟಿ ಚೆನ್ನಯ ಜೋಡುಕರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗುಣಪಾಲ ಕಡಂಬ, ದೋಟ ಹರಿಮೀನಾಕ್ಷಿ ಸುರೇಶ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಮತ್ತಿತರರಿದ್ದರು.
ಒಂಟಿಕಟ್ಟೆಯ ಕೋಟಿ ಚೆನ್ನಯ ಜೋಡುಕರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗುಣಪಾಲ ಕಡಂಬ, ದೋಟ ಹರಿಮೀನಾಕ್ಷಿ ಸುರೇಶ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಮತ್ತಿತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕಂಬಳ ಅಕಾಡೆಮಿ ವತಿಯಿಂದ 42 ಮಂದಿ ಯುವ ಓಟಗಾರರಿಗೆ ನೀಡಲಾಗುತ್ತಿರುವ ಏಳನೇ ವರ್ಷದ ತರಬೇತಿ ಅಂಗವಾಗಿ ಗುರುವಾರ ಕಡಲಕೆರೆ ಕೋಟಿ ಚೆನ್ನಯ ಜೋಡುಕರೆಯಲ್ಲಿ ಪ್ರಾಯೋಗಿಕ ಕಂಬಳ ನಡೆಯಿತು. ನೇಗಿಲು ಕಿರಿಯ, ಸಬ್ ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಸಾತ್ವಿಕ್ ಶೆಟ್ಟಿ, ಚೈತೇಶ್ ಪೂಜಾರಿ, ಸುಜಿತ್ ಕೋಟ್ಯಾನ್, ಸುರೇಂದ್ರ ಎಸ್.ಶೆಟ್ಟಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡರು.

ನೇಗಿಲು ಕಿರಿಯ ವಿಭಾಗ

ವೇಣೂರು ಪೆರ್ಮುಡದ ಸನತ್ ಸಂಪತ್ ಅಂಚನ್ ಅವರ ಕೋಣಗಳನ್ನು ಓಡಿಸಿದ ಶಿಬಿರಾರ್ಥಿ ತಲಪಾಡಿ ಸಾಂತ್ಯ ಮೇಗಿನಮನೆಯ ಸಾತ್ವಿಕ್ ಶೆಟ್ಟಿ ಪ್ರಥಮ ಬಹುಮಾನ ಪಡೆದರು. ಕಡಂದಲೆ ಮುಡಾಯಿಬೆಟ್ಟು ವಿಶ್ವನಾಥ ನಿವಾಸದ ಕೀರ್ತನ್ ಮೋಹಿತ್ ಪಾಣರ ಅವರ ಕೋಣಗಳನ್ನು ಓಡಿಸಿದ ಮಣೇಲ್ ಚೈತೇಶ್ ಪೂಜಾರಿ ದ್ವಿತೀಯ ಬಹುಮಾನ ಗಳಿಸಿದರು.

ಪಣಪಿಲ ಕಲ್ಲೇರಿ ಯುವ ಬಾಂಧವರ ಕೋಣಗಳನ್ನು ಓಡಿಸಿದ ಮಾರ್ನಾಡ್ ಹಾದ್ ತೃತೀಯ ಸ್ಥಾನ ಪಡೆದರೆ, ಕುಕ್ಕುಂದೂರು ನಕ್ರೆಯ ವಾಣಿ ಮನೋಜ್ ಪೂಜಾರಿ ಅವರ ಕೋಣಗಳನ್ನು ಓಡಿಸಿದ ಬಳ್ಳಮಂಜದ ಪ್ರೇಮನಾಥ್ ನಾಲ್ಕನೇ ಸ್ಥಾನ ಪಡೆದರು. ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 24 ಜತೆ, ಸಬ್ ಜೂನಿಯರ್ ವಿಭಾಗದಲ್ಲಿ 37 ಜತೆ ಕೋಣಗಳು ಭಾಗವಹಿಸಿದ್ದವು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಕಂಬಳದ ಪ್ರೋತ್ಸಾಹಕ ದೋಟ ಹರಿಮೀನಾಕ್ಷಿ ಸುರೇಶ್ ಶೆಟ್ಟಿ, ಐಕಳ ಬಾವ ಕಂಬಳ ಸಮಿತಿ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಕೈತ್ರೋಡಿ, ಅಕಾಡೆಮಿ ಸದಸ್ಯ ಸುರೇಶ್ ಕೆ.ಪೂಜಾರಿ, ಶಿಬಿರಾಕಾರಿ ಜಾನ್ ಸಿರಿಲ್ ಡಿಸೋಜ, ಹಿರಿಯ ಕಂಬಳ ಓಟಗಾರ ಆದಿರಾಜ್ ಜೈನ್, ಕಂಬಳ ಕೋಣಗಳ ಯಜಮಾನ ಮಾಳ ದಿನೇಶ್ ಶೆಟ್ಟಿ, ಸಮಿತಿ ಸದಸ್ಯ ಜ್ವಾಲ ಪ್ರಸಾದ್, ನವೀನ್ ಅಂಬೂರಿ, ರವೀಂದ್ರ ಶೆಟ್ಟಿ ಕುಕ್ಕುಂದೂರು, ನವೀನ್ ಸಾಂತ್ ಪಾಲ್, ಅಬ್ದುಲ್ ಸತ್ತಾರ್ ಒಂಟಿಕಟ್ಟೆ, ರಘು ಪೆಲಕುಂಜ ಉಪಸ್ಥಿತರಿದ್ದರು.

ಸಬ್ ಜೂನಿಯರ್ ವಿಭಾಗ

ಬೋಳ ಹೊಸಮನೆಯ ಕೌಶಿಕ್ ಕೋಟ್ಯಾನ್ ಅವರ ಕೋಣಗಳನ್ನು ಓಡಿಸಿದ ಬೋಳ ಹೊಸಮನೆಯ ಸುಜಿತ್ ಕೋಟ್ಯಾನ್ ಪ್ರಥಮ ಬಹುಮಾನ ಪಡೆದರು. ಪಡು ಸಾಂತೂರು ಕಲ್ಯಾಣಿ ನಿವಾಸದ ಅಶೋಕ್ ಪೂಜಾರಿ-ಎ ಅವರ ಕೋಣಗಳನ್ನು ಓಡಿಸಿದ ಮಾಣಿ ಶಂಭುಗದ ಸುರೇಂದ್ರ ಎಸ್.ಶೆಟ್ಟಿ ದ್ವಿತೀಯ ಬಹುಮಾನ ಗಳಿಸಿದರು. ಕಾಂತಾವರ ಬಾಂದೊಟ್ಟಿನ ನಿಖಿಲ್ ಮೋಕ್ಷಿ ಪೂಜಾರಿ ಅವರ ಕೋಣಗಳನ್ನು ಓಡಿಸಿದ ಮಿಜಾರು ಅಶ್ವತ್ಥಪುರದ ಲಕ್ಷ್ಮಣ್ ಗೌಡ ತೃತೀಯ ಬಹುಮಾನ ಪಡೆದರು. ಉಡುಪಿ ಕೊಡವೂರಿನ ಅಣ್ಣಪ್ಪ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ ಎಕ್ಕೂರಿನ ಸುಮನ್ ನಾಲ್ಕನೇ ಬಹುಮಾನ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net