ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ : ಅಶೋಕ್ ರೈ

 ಒಳಮೊಗ್ರು ಗ್ರಾಮದ ಎರ್ಮೆಟ್ಟಿ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಿಂಡಿ ಅಣೆಕಟ್ಟನ್ನು ಶಾಸಕ ಅಶೋಕ್ ರೈ ಪರಿಶೀಲನೆ ನಡೆಸಿದರು.
ಒಳಮೊಗ್ರು ಗ್ರಾಮದ ಎರ್ಮೆಟ್ಟಿ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಿಂಡಿ ಅಣೆಕಟ್ಟನ್ನು ಶಾಸಕ ಅಶೋಕ್ ರೈ ಪರಿಶೀಲನೆ ನಡೆಸಿದರು.
Published on

ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಎರ್ಮೆಟ್ಟಿ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಿಂಡಿ ಅಣೆಕಟ್ಟನ್ನು ದುರಸ್ತಿ ಆಗ್ರಹಿಸಿ ಗ್ರಾಮಸ್ಥರ ಮನವಿಯ ಮೇರೆಗೆ ಶಾಸಕ ಅಶೋಕ್ ರೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಸ ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಿದರು.



ಶಿಥಿಲಾವಸ್ಥೆಯ ಕಿಂಡಿ ಅಣೆಕಟ್ಟನ್ನು ಪರಿಶೀಲಿಸಿದ ಶಾಸಕರು, ಈ ಹಿಂದೆ ಮಂಜೂರಾದ ಕಿಂಡಿ ಅಣೆಕಟ್ಟುಗಳು ನಿರ್ವಹಣೆಯಿಲ್ಲದೆ ಪಾಳುಬಿದ್ದಿವೆ. ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೃಷಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಪುತ್ತೂರಿಗೆ ಈಗಾಗಲೇ ಅನೇಕ ಕಿಂಡಿ-ಅಣೆಕಟ್ಟುಗಳು ಮಂಜೂರಾಗಿದೆ. ಇಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ವರ್ಷ ಕಾಮಗಾರಿ ಆರಂಭವಾಗಲಿದೆ. ಅಲ್ಲಿಯ ತನಕ ಇರುವ ಅಣೆಕಟ್ಟನ್ನು ಉಳಿಸಿಕೊಳ್ಳುವಂತೆ ತಿಳಿಸಿದರು.


ಪ್ರಗತಿಪರ ಕೃಷಿಕ ಸೀತಾರಾಮ ರೈ ಕೈಕಾರ, ಸ್ಥಳೀಯರಾದ ಸತೀಶ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿದರು. ರುರಾಮ ರೈ ಎರ್ಮೆಟ್ಟಿ, ಸತೀಶ್ ರೈ ನೀರ್ಪಾಡಿ, ರುಘುರಾಮ ರೈ ವಾಪಲ, ರಾಧಾಕೃಷ್ಣ ರೈ ಮತ್ತಿತರರಿದ್ದರು. ಮನ್ಮಥ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net