

ಮಂಗಳೂರು : ಅಪಸ್ಮಾರ (ಮೂರ್ಛೆ ರೋಗ) ರೋಗವು ಮೆದುಳಿನಲ್ಲಿನ ನರಕೋಶಗಳಿಗೆ ಉಂಟಾಗುವ ಹಾನಿ, ಅಸಮತೋಲನ, ನರಗಳ ದೌರ್ಬಲ್ಯದಿಂದ ಬರುವ ಖಾಯಿಲೆ. ಪ್ರಾಥಮಿಕ ಹಂತದಲ್ಲಿ ನುರಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬೆಂಗಳೂರು ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕ ಡಾ.ನಿಹಾಲ್ ಅಹಮದ್ ಹೇಳಿದರು.