

ಸುಬ್ರಹ್ಮಣ್ಯ: ವಿದ್ಯಾರ್ಥಿಗಳ ಮೌಲ್ಯಯುತ ಬದುಕಿಗೆ ರಹದಾರಿಯಾಗಿರುವ ಎನ್ಎಸ್ಎಸ್ ಸೇವಾ ಮನೋಭಾವದೊಂದಿಗೆ ವಿದ್ಯಾರ್ಥಿ ದೆಸೆಯಿಂದಲೇ ಜೀವನ ಪಾಠ ಕಲಿಸುತ್ತದೆ. ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಅರಣ್ಯ ಸಮೃದ್ಧಿಯಿಂದ ಆರೋಗ್ಯಪೂರ್ಣ ನಾಳೆಗಳು ನಮಗೆ ದೊರಕುತ್ತದೆ ಎಂಬ ಜಾಗೃತಿಯನ್ನು ವಿದ್ಯಾರ್ಥಿಗಳು ಇತರರಲ್ಲಿ ಮೂಡಿಸಬೇಕು ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು.
ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಎಸ್ಎಸ್ಪಿಯು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುಣವರ್ಧನ ಕೆದಿಲ, ಸದಸ್ಯರಾದ ಭವ್ಯಾ, ರಾಧಾಕೃಷ್ಣ ಪರಮಲೆ, ಪ್ರಮುಖರಾದ ವಸಂತ ರೈ ಕಾರ್ಕಳ, ನಾಗೇಶ್ ರೈ ಮಾಳ, ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ, ಎನ್ಎಸ್ಎಸ್ ನಾಯಕರಾದ ಅಭಿಲಾಷ್, ಸುದೀಕ್ಷಾ ಡಿ.ಕುಂದರ್, ಚಿಂತನ್, ರಚನಾ ಟಿ. ಉಪಸ್ಥಿತರಿದ್ದರು.