2017ರ ಏ.5ರಿಂದ 9ರವರೆಗೆ ಜಿಲ್ಲೆಯ 5 ಕೇಂದ್ರಗಳಲ್ಲಿ ನಡೆದ ತಜ್ಞ ವೈದ್ಯರನ್ನೊಳಗೊಂಡ ವಿಶೇಷ ವೈದ್ಯಕೀಯ ಶಿಬಿರದಿಂದ 1,905 ಜನರನ್ನು ತಪಾಸಣೆಗೊಳಪಡಿಸಿ, ಅವರನ್ನು ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದಾಗಿ ಎಂಡೋಸಲ್ಫಾನ್ ಸೆಲ್‌ನ ಅಂದಿನ ಸಹಾಯಕ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದರು. ನಂತರ ಸಕಾರಣವಿಲ್ಲದೆ ಈ ಸಂಖ್ಯೆಯನ್ನು 287ಕ್ಕೆ ಕಡಿತಗೊಳಿಸಲಾಗಿತ್ತು. ಈ ಸಂದರ್ಭ ಪೀಪಲ್ಸ್ ್ರಂಟ್ ನೇತೃತ್ವದಲ್ಲಿ ನಡೆದ ಹೋರಾಟದ ಹಿನ್ನೆಲೆಯಲ್ಲಿ 76 ಮಂದಿ ಸಂತ್ರಸ್ತರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಬಾಕಿ ಉಳಿದ ಎಲ್ಲ ಸಂತ್ರಸ್ತರನ್ನು ಪಟ್ಟಿಗೆ ಸೇರ್ಪಡೆಗೊಳಿಸುವಂತೆ 2019 ಜ.30ರಂದು ರಾಜ್ಯ ಸೆಕ್ರೆಟರಿಯೇಟ್ ಮುಂದೆ ತಾಯಂದಿರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಮುಖ್ಯಮಂತ್ರಿ ಜತೆಗಿನ ಚರ್ಚೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಸೇರಿಸಿಕೊಳ್ಳಲು, ಉಳಿದವರ ವೈದ್ಯಕೀಯ ದಾಖಲೆ ಪರಿಶೀಲಿಸಲು ನಿರ್ಧರಿಸಲಾಗಿತ್ತು. 18 ವರ್ಷದೊಳಗಿನ 511 ಮಕ್ಕಳನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದರೂ, ಉಳಿದ 1,031 ಜನರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.