ಎಂಡೋಪೀಡಿತರ ಪಾಲನೆಗೆ ಸಾಂತ್ವನ ಕೇಂದ್ರ ENDO

ವಿಟ್ಲದಲ್ಲಿ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತೆರೆಯಲಾಗಿರುವ ಎಂಡೋಸಲ್ಪಾನ್ ಸಂತ್ರಸ್ತರ ಸಾಂತ್ವನ ಕೇಂದ್ರ.
ವಿಟ್ಲದಲ್ಲಿ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತೆರೆಯಲಾಗಿರುವ ಎಂಡೋಸಲ್ಪಾನ್ ಸಂತ್ರಸ್ತರ ಸಾಂತ್ವನ ಕೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ದ.ಕ. ಜಿಲ್ಲೆಯ ನಾಲ್ಕು ಕಡೆ ಕಾರ್ಯಾರಂಭ
  • ಪರಿಣತರಿಂದ ವಿವಿಧ ಥೆರಪಿ

ಪುತ್ತೂರು: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಸೂಚನೆಯಂತೆ ಸರ್ಕಾರ ದಶಕದ ಬಳಿಕ .. ಜಿಲ್ಲೆಯ ಕಡೆ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ. ೧೫ರಿಂದ ೨೦ ಮಂದಿ ಸಂತ್ರಸ್ತರುನಿರಂತರವಾಗಿ ಕೇಂದ್ರಕ್ಕೆ ಹಾಜರಾಗುತ್ತಿದ್ದು, ವಿವಿಧ ವಿಭಾಗದಲ್ಲಿ ಚಟುವಟಿಕೆ ನಡೆಸಲಾಗುತ್ತಿದೆ.

ಬೆಂಗಳೂರಿನಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ಮೂಲಕ ಪಾಲನಾ ಕೇಂದ್ರದ ನಿರ್ವಹಣೆಗೆ ಸರ್ಕಾರ ಮುಂದಾಗಿದೆ. ಒಂದು ಕೇಂದ್ರದಲ್ಲಿ ೫ರಿಂದ ೧೦ ಸಿಬ್ಬಂದಿ ನೇಮಿಸಲಾಗಿದೆ.ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರಿಗೆ ಮನೆಗೇ ತೆರಳಿ ಅಗತ್ಯ ಸೇವೆ ನೀಡುವ ಸಂಚಾರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ನಡೆದಾಡಲು ಸಾಧ್ಯವಿರುವ ಎಂಡೋಪೀಡಿತ ಮಕ್ಕಳು ಮನೆಯಲ್ಲಿ ಗೋಡೆಗಳ ನಡುವೆಉಳಿಯುವ ಬದಲಾಗಿ ಎಲ್ಲರ ಜತೆಗೆ ಬೆರೆಯಲು ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ.

*ಏನೇನುಸೌಲಭ್ಯಗಳಿವೆ?:

ದಕ್ಷಿಣಕನ್ನಡದ ವಿಟ್ಲ, ಪಾಣಾಜೆ, ಬೆಳ್ಳಾರೆ, ಕಾಣಿಯೂರು ಭಾಗದಲ್ಲಿ ಕೇಂದ್ರ ತೆರೆಯಲಾಗಿದೆ. ಕೇಂದ್ರದಲ್ಲಿ ವರ್ಷದಿಂದ ೩೫ವರ್ಷದವರೆಗಿನ ಸಂತ್ರಸ್ತರಿಗೆ ವ್ಯವಸ್ಥೆ ಕಲ್ಪಿಸಲು ಅವಕಾಶವಿದ್ದು, ಸದ್ಯ ೫೩ ವರ್ಷದವರೆಗಿನ ಎಂಡೋಪೀಡಿತರಿಗೂವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಆಕ್ಯುಪ್ರೆಶರ್ ಥೆರಪಿ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಸೌಲಭ್ಯಗಳಿವೆ. ನೋಂದಾಯಿಸಿದ ಸಂತ್ರಸ್ತರನ್ನು ಮನೆಯಿಂದ ಕೇಂದ್ರಕ್ಕೆ ಕರೆತರಲು, ಮರಳಿ ಬಿಡಲು ವಾಹನ ವ್ಯವಸ್ಥೆಯನ್ನು ಟ್ರಸ್ಟ್ ಕಲ್ಪಿಸಿದೆ.

ತಾಲೂಕುವ್ಯಾಪ್ತಿಯಲ್ಲಿ ಸೇವೆ

ಕೇಂದ್ರದಸುಮಾರು ೧೫ ಕಿ.ಮೀ.ವ್ಯಾಪ್ತಿಯ ಎಂಡೋಪೀಡಿತರು ಇಲ್ಲಿ ಸೇರ್ಪಡೆಯಾಗಬಹುದು. ತಾಲೂಕಿನ ಸಂತ್ರಸ್ತರಿಗೆ ಕೇಂದ್ರದಲ್ಲಿ ಅಗತ್ಯ ನೆರವು ಸಿಗಲಿದೆ. ಸದ್ಯ ೪೦ರಿಂದ ೫೦ ಮಂದಿ ನೋಂದಾಯಿಸಿಕೊಂಡಿದ್ದು,ಎಲ್ಲ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗದಕಾರಣ ೧೦ರಿಂದ ೨೦ ಮಂದಿ ಆಗಮಿಸುತ್ತಿದ್ದಾರೆ.ಪಾಣಾಜೆ ೧೨, ಕಾಣಿಯೂರು , ಬೆಳ್ಳಾರೆ ೧೩,ವಿಟ್ಲ ಕೇಂದ್ರಕ್ಕೆ ೧೫ ಮಂದಿ ನಿತ್ಯಆಗಮಿಸುತ್ತಿದ್ದಾರೆ.

ನ್ಯಾಯಾಲಯದಸೂಚನೆ

೨೦೧೪ರಲ್ಲಿಎಂಡೋ ಸಂತ್ರಸ್ತರನ್ನು ಮುಖ್ಯವಾಹಿನಿಗೆ ತರಲು ಬೇಕಾದ ವ್ಯವಸ್ಥೆ ಕಲ್ಪಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿತ್ತು. ಎಂಡೋ ಹೋರಾಟಗಾರರು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಬೆನ್ನುಬಿದ್ದ ಕಾರಣ ಕೆಲವರ್ಷದ ಹಿಂದೆ ಪಾಲನಾ ಕೇಂದ್ರ ಸಿದ್ಧಪಡಿಸಲಾಗಿತ್ತು. ಈಗ ಖಾಸಗಿ ಸಹಭಾಗಿತ್ವದಮೂಲಕ ಆರೋಗ್ಯ ಇಲಾಖೆ ಕಾರ್ಯಾರಂಭ ಮಾಡಿದೆ.

"

ಎಂಡೋ ಪಾಲನಾ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ಆಟ ಸೇರಿ ವಿವಿಧ ಚಟುವಟಿಕೆ ನಡೆಸುತ್ತಾರೆ. ಉತ್ತಮ ಅನುಭವ ನೀಡುತ್ತಿದೆ.

— ನಾಗೇಶ್ ಪುಚ್ಚೆಗುತ್ತು, ಎಂಡೋಪೀಡಿತ
"

ಸಂತ್ರಸ್ತರ ಅಗತ್ಯಕ್ಕೆ ಬೇಕಾದಂತೆ ಥೆರಪಿ ಕೇಂದ್ರ ತೆರೆಯಲಾಗಿದೆ. ವಿವಿಧ ತರಬೇತಿ ನೀಡುವ ಜತೆಗೆ ಔಷಧೋಪಚಾರ ಮಾಡಲಾಗುತ್ತದೆ. ಶೀಘ್ರದಲ್ಲೇ ಆರೋಗ್ಯ ಸಚಿವರು ಎಲ್ಲ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ.

— ಡಾ.ಎಚ್.ಆರ್.ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net