ರಸ್ತೆಗಂಟಿದ ವಿದ್ಯುತ್ ಕಂಬ! : ಸ್ಥಳಾಂತರಿಸದೆ ಕಾಂಕ್ರೀಟಿಕರಣ : ಸಾರ್ವಜನಿಕರಿಂದ ಆಕ್ರೋಶ

 ವಿದ್ಯುತ್ ಕಂಬದ ಸನಿಹದಲ್ಲಿ ಕಾಂಕ್ರೀಟಿಕರಣಗೊಳಿಸಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿರುವುದು.
ವಿದ್ಯುತ್ ಕಂಬದ ಸನಿಹದಲ್ಲಿ ಕಾಂಕ್ರೀಟಿಕರಣಗೊಳಿಸಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿರುವುದು.
Published on

ಮೆಸ್ಕಾಂ ಈ ಹಿಂದೆ ಕಂಬ ಹಾಕುವಾಗ ರಸ್ತೆ ಪಕ್ಕದಲ್ಲಿ ಸಾಕಷ್ಟು ಜಾಗವಿತ್ತು. ಆಗಲೇ ರಸ್ತೆಯಿಂದ ದೂರ ಕಂಬ ಹಾಕಬಹುದಿತ್ತು. ಆದರೆ ಅಂದು ಮೆಸ್ಕಾಂ ಈ ಕಾರ್ಯ ಮಾಡಿಲ್ಲ. ಅದರ ಪರಿಣಾಮ ಈಗ ತೊಂದರೆಯಾಗುತ್ತಿದೆ. ಇದೀಗ ಕಾಮಗಾರಿ ಪ್ರಾರಂಭವಾಗುವ ಮುನ್ನ ಕಂಬ ಸ್ಥಳಾಂತರಕ್ಕೆ ಮೆಸ್ಕಾಂ ಇಲಾಖೆಯ ಸಹಕಾರ ಅಗತ್ಯ.

ಕಡಬ- ಪಂಜ ರಸ್ತೆಯ ಕಡಬ ಸರ್ಕಾರಿ ಆಸ್ಪತ್ರೆ ಬಳಿ ನಡೆಯುವ ಕಾಂಕ್ರೀಟಿಕರಣ ಕಾಮಗಾರಿ ವೇಳೆ ವಿದ್ಯುತ್ ಕಂಬಗಳ ಪಕ್ಕದಲ್ಲಿ ಕಾಂಕ್ರೀಟಿಕರಣಕ್ಕೆ ಸಿದ್ಧತೆ ನಡೆಯುವ ಬಗ್ಗೆ ಗಮನಕ್ಕೆ ಬಂದಿದೆ. ಇಲ್ಲಿ ಸುಮಾರು 25 ವರ್ಷಗಳ ಹಿಂದೆ ಹಾಕಿರುವ ಕಂಬಗಳು ಇದಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿರುವ ಕಂಬಗಳ ತೆರವು ಮಾಡುವಂತೆ ಲೋಕೋಪಯೋಗಿ ಇಲಾಖೆ ಮನವಿ ಮಾಡಬೇಕಿತ್ತು. ಇದಕ್ಕೆ ತಗಲುವ ವೆಚ್ಚದ ಶೇ.5ರಷ್ಟು ಶುಲ್ಕವನ್ನು ಮೆಸ್ಕಾಂಗೆ ಪಾವತಿಸಬೇಕು. ಇದ್ಯಾವೂದನ್ನು ಮಾಡಿಲ್ಲ. ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆಯಲ್ಲಿ ಈಗಾಗಲೇ ನಾವೇ ಮುಂದಾಗಿ ಕೆಲವು ಕಟ್ಟಡಗಳಿಗೆ ನೀಡಿದ ವಿದ್ಯುತ್ ಸಂಪರ್ಕ ತಂತಿಗಳು, ಕಂಬಗಳನ್ನು ತೆರವಿಗೆ ಮುಂದಾಗಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net