ಬೆಂಕಿ ತಗುಲಿದ್ದ ವೃದ್ಧ ಸಾವು

ಹೊಸದುರ್ಗ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು
death
death
Published on: 

ಕಾಸರಗೋಡು: ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ವೆಳ್ಳಿಕ್ಕೋತ್ ನಿವಾಸಿ ಪದ್ಮನಾಭನ್ (60) ಚಿಕಿತ್ಸೆಗೆ ಸ್ಪಂದಸಿದೆ ಮೃತಪಟ್ಟಿದ್ದಾರೆ. ಕಳೆದ ಗುರುವಾರ ಮನೆಯಲ್ಲಿ ಬೆಂಕಿ ತಗುಲಿ ಸುಟ್ಟು ಗಾಯಗೊಂಡ ಸ್ಥಿತಿಯಲ್ಲಿ ಪದ್ಮನಾಭನ್ ಪತ್ತೆಯಾಗಿದ್ದರು. ತಕ್ಷಣ ಕಾಞಂಗಾಡಿನ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪದ್ಮನಾಭನ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಹೋದರ ಚಿರುವತ್ತೂರು ನಿವಾಸಿ ಪಿ.ಕೆ.ಜನಾರ್ದನನ್ ಪೊಲೀಸರಿಗೆ ದೂರು ನೀಡಿದ್ದಾರೆ. ವಾರದ ಹಿಂದೆ ಸಂಬಂಧಿ ಮಹಿಳೆ ಹಾಗೂ ಮಗುವನ್ನು ಹಲ್ಲೆಗೈದ ಟನೆ ಸಂಬಂಧ ಪದ್ಮನಾಭನ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬೆಂಕಿ ತಗುಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೊಸದುರ್ಗ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನಗಳ ಕಳವು ಆರೋಪಿ ಬಂಧನ

ಕಾಸರಗೋಡು: ಹಲವು ದ್ವಿಚಕ್ರ ವಾಹನ ಕಳವು ಪ್ರಕರಣಗಳ ಆರೋಪಿ, ನೀಲೇಶ್ವರ ಚೆರುಪುರಂ ಅರಿಂಗೋಳ ನಿವಾಸಿ ಸಮೀರ್ (30) ಎಂಬಾತನನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳವುಗೈದ ಬೈಕ್‌ಗಳ ಪೈಕಿ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇತರ ದ್ವಿಚಕ್ರ ವಾಹನಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ. ಸೆ.4ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಆವರಣದಲ್ಲಿ ಎರಡು ಬೈಕ್‌ಗಳು ಕಳವಾಗಿದ್ದವು. ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸಮೀರ್ ಕಳವು ಮಾಡಿರುವ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net