ದಲಿತರ ಮನೆಗೆ ಡಿವೈಎಸ್ಪಿ ರೋಹಿಣಿ ಭೇಟಿ

ಅಭಿಕಾರದಲ್ಲಿ ವಾಸಿಸುತ್ತಿರುವ ಕುಂಞ ಮತ್ತು ಲತಾ ದಂಪತಿ ಮನೆಗೆ ಡಿವೈಎಸ್‌ಪಿ ರೋಹಿಣಿ, ಕಡಬ ಠಾಣೆ ಉಪನಿರೀಕ್ಷಕ ಭೇಟಿ ನೀಡಿದರು. ದಲಿತ ಮುಖಂಡ ರಾವ ಕಳಾರ ಇತರರಿದ್ದರು.
ಅಭಿಕಾರದಲ್ಲಿ ವಾಸಿಸುತ್ತಿರುವ ಕುಂಞ ಮತ್ತು ಲತಾ ದಂಪತಿ ಮನೆಗೆ ಡಿವೈಎಸ್‌ಪಿ ರೋಹಿಣಿ, ಕಡಬ ಠಾಣೆ ಉಪನಿರೀಕ್ಷಕ ಭೇಟಿ ನೀಡಿದರು. ದಲಿತ ಮುಖಂಡ ರಾವ ಕಳಾರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಕಾರದಲ್ಲಿ ಶೌಚಗೃಹ ಇಲ್ಲದಿರುವ ಬಡ ದಲಿತ ಕುಟುಂಬದ ಮನೆಗೆ ಬೆಳ್ತಂಗಡಿ ಡಿವೈಎಸ್‌ಪಿ ಸಿ.ಕೆ.ರೋಹಿಣಿ ಭೇಟಿ ನೀಡಿ ಪರಿಶೀಲಿಸಿ, ಕುಟುಂಬಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.
ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿದ ರೋಹಿಣಿ ಅವರಿಗೆ ಸೌಲಭ್ಯ ವಂಚಿತ ಬಡ ದಲಿತ ಕುಟುಂಬದ ಸಮಸ್ಯೆ ಬಗ್ಗೆ ಭೀಮ್ ಆರ್ಮಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ಗಮನಕ್ಕೆ ತಂದಿದ್ದರು.

ಟಾರ್ಪಾಲು ಮನೆಯಲ್ಲಿ ವಾಸ

ಪ್ರಾಕೃತಿಕ ವಿಕೋಪ ಸಂದರ್ಭ ಮರ ಕುಸಿದು ಮನೆ ಮಾಡು ಹಾನಿಗೀಡಾಗಿ ಟಾರ್ಪಾಲು ಹಾಸಿದ ಮನೆಯಲ್ಲಿ ದಂಪತಿ ವಾಸವಿದ್ದಾರೆ. ಶೌಚಗೃಹ ನಿರ್ಮಿಸಿಕೊಡುವಂತೆ ಸ್ಥಳೀಯ ಪಂಚಾಯಿತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಭೀಮ್ ಆರ್ಮಿ ಆರೋಪಿಸಿದೆ.
ಕಾಣಿಯೂರು ಪಿಡಿಒ ರಘು ಎನ್.ಬಿ. ಮಾತನಾಡಿ, ಆರು ತಿಂಗಳ ಹಿಂದಿನ ಪ್ರಾಕೃತಿಕ ವಿಕೋಪ ಸಂದರ್ಭ ಮರ ಬಿದ್ದು ಕುಂಞ ಹಾಗೂ ಲತಾ ದಂಪತಿ ಮನೆಗೆ ಹಾನಿಯಾಗಿದೆ. ಕಂದಾಯ ಇಲಾಖೆಯಿಂದ 1.20 ಲಕ್ಷ ರೂ.ಪರಿಹಾರ ಮಂಜೂರಾಗಿದೆ. ಶೌಚಗೃಹ ನಿರ್ಮಾಣಕ್ಕೆ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
----ೆಟೊ-----
ಕೆಡಿಬಿ 24 ೆಬ್ರವರಿ -ಡಿವೈಎಸ್‌ಪಿ
ಅಭಿಕಾರದಲ್ಲಿ ವಾಸಿಸುತ್ತಿರುವ ಕುಂಞ ಮತ್ತು ಲತಾ ದಂಪತಿ ಮನೆಗೆ ಡಿವೈಎಸ್‌ಪಿ ರೋಹಿಣಿ, ಕಡಬ ಠಾಣೆ ಉಪನಿರೀಕ್ಷಕ ಭೇಟಿ ನೀಡಿದರು. ದಲಿತ ಮುಖಂಡ ರಾವ ಕಳಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net