ಪೇಟೆಯಲ್ಲಿ ಕುಡುಕರ ಹಾವಳಿ!

ಸೀತಾಂಗೋಳಿ ಪೇಟೆಯಲ್ಲಿರುವ ಪೊಲೀಸ್ ಏಯ್ಡ ಪೋಸ್ಟ್ ಮುಚ್ಚಿಕೊಂಡಿದೆ.
ಸೀತಾಂಗೋಳಿ ಪೇಟೆಯಲ್ಲಿರುವ ಪೊಲೀಸ್ ಏಯ್ಡ ಪೋಸ್ಟ್ ಮುಚ್ಚಿಕೊಂಡಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಸೀತಾಂಗೋಳಿಯಲ್ಲಿ ಕಾನೂನುಬಾಹಿರ ಚಟುವಟಿಕೆ
  • ಜನರ ನೆಮ್ಮದಿ ಭಂಗ

ಪುರುಷೋತ್ತಮಪೆರ್ಲ ಕಾಸರಗೋಡು

ಅಭಿವೃದ್ಧಿಯಪಥದಲ್ಲಿರುವ ಸೀತಾಂಗೋಳಿ ಪೇಟೆಯಆಸುಪಾಸು ನಡೆಯುತ್ತಿರುವ ಸಮಾಜಘಾತುಕಕೃತ್ಯಗಳು ಜನರ ನಿದ್ದೆಗೆಡಿಸುತ್ತಿವೆ.ಪುತ್ತಿಗೆಗ್ರಾಮ ಪಂಚಾಯಿತಿ ವ್ಯಾಪ್ತಿಯಸೀತಾಂಗೋಳಿ ಪೇಟೆ ಕುಂಬಳೆ ಮತ್ತುಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಸಂಗಮ ಪ್ರದೇಶವಾಗಿದೆ.ಸೀತಾಂಗೋಳಿಪೇಟೆಯಲ್ಲಿರುವ ಮದ್ಯ ಮಾರಾಟಕೇಂದ್ರದ ಆಸುಪಾಸು ದಿನಕ್ಕೊಂದರಂತೆಸಾಮಾಜಿಕ ಶಾಂತಿ ಕದಡುವ ಕೃತ್ಯಗಳುಮರುಕಳಿಸುತ್ತಿರುವುದು ಸಾರ್ವಜನಿಕರನೆಮ್ಮದಿಗೆ ಭಂಗವುಂಟಾಗುತ್ತಿರುವುದಾಗಿವ್ಯಾಪಕ ದೂರು ಕೇಳಿಬರುತ್ತಿದೆ.

ಬೆಳೆಯುತ್ತಿರುವಸೀತಾಂಗೋಳಿ ಪೇಟೆಯಲ್ಲಿ ಕಳೆದಒಂದೆರಡು ವರ್ಷದೊಳಗೆ ಕೊಲೆಪ್ರಕರಣ,ಹತ್ಯಾಯತ್ನ,ಗೂಂಡಾ ಆಕ್ರಮಣಸೇರಿದಂತೆ 15ಕ್ಕೂಹೆಚ್ಚು ಅಪರಾಧಿ ಕೃತ್ಯಗಳುದಾಖಲಾಗಿವೆ.

ಮದ್ಯ ಮಾರಾಟ ಕೇಂದ್ರದಸುತ್ತಮುತ್ತ ಸಾರ್ವಜನಿಕಪ್ರದೇಶದಲ್ಲೇ ಮದ್ಯಪಾನ,ಆಹಾರ ಸೇವನೆನಡೆಯುತ್ತಿದೆ.ಮದ್ಯ ಸೇವಿಸಿದಬಾಟಲಿಗಳನ್ನು ಅಲ್ಲಲ್ಲಿಎಸೆಯುತ್ತಿರುವುದರಿಂದ ಬಾಟಲಿಗಳುಒಡೆದು ಪಾದಚಾರಿಗಳಲ್ಲಿ ಭೀತಿಸೃಷ್ಟಿಸುತ್ತಿದೆ.ಸಾರ್ವಜನಿಕಪ್ರದೇಶದಲ್ಲಿ ಮದ್ಯಪಾನ ನಡೆಸುವವರಿಂದಮಹಿಳೆಯರಿಗೆ,ವಿದ್ಯಾರ್ಥಿನಿಯರಿಗೆನಡೆದುಕೊಂಡು ಹೋಗಲಾಗದ ಪರಿಸ್ಥಿತಿಎದುರಾಗಿದೆ.

ಸೀತಾಂಗೋಳಿ ಪೇಟೆಯ ಪುತ್ತಿಗೆ-ಪೆರ್ಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿರುವುದು.

ಪೊಲೀಸ್ ಔಟ್‌ಪೋಸ್ಟ್ಬೇಕು

ಸೀತಾಂಗೋಳಿ ಪೇಟೆಹಾಗೂ ಆಸುಪಾಸು ಸಾಮಾಜಿಕ ನೆಮ್ಮದಿಕಾಪಾಡಲು ಮತ್ತು ಪರಿಸರದ ಅಹಿತಕರಘಟನೆ ತಡೆಗೆ ಸೀತಾಂಗೋಳಿ ಪೇಟೆಯಲ್ಲಿಪೂರ್ಣಪ್ರಮಾಣದಲ್ಲಿ ಪೊಲೀಸ್ಔಟ್‌ಪೋಸ್ಟ್ ಕಾರ್ಯಾಚರಿಸಲುಅಗತ್ಯ ಕ್ರಮ ಕೈಗೊಳ್ಳಬೇಕು.ಈ ಬಗ್ಗೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರುಆಗ್ರಹಿಸಿದ್ದಾರೆ.

ಅಡ್ಡಾದಿಡ್ಡಿಪಾರ್ಕಿಂಗ್

ಮದ್ಯ ಮಾರಾಟ ಕೇಂದ್ರಕಾರ್ಯಾಚರಿಸುತ್ತಿರುವ ಪ್ರದೇಶದಲ್ಲಿಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದಇತರ ವಾಹನ ಚಾಲಕರು ಸಮಸ್ಯೆಎದುರಿಸಬೇಕಾಗುತ್ತಿದೆ.ಸಂಜೆ ವೇಳೆಈ ಪ್ರದೇಶದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ವಾಹನಗಳು ಬಂದುನಿಲ್ಲುತ್ತಿದ್ದು,ಇತರ ವಾಹನಗಳಸುಗಮ ಸಂಚಾರಕ್ಕೂ ತೊಡಕಾಗುತ್ತಿದೆ.

"

ಸೀತಾಂಗೋಳಿ ಪೇಟೆಯ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿ ಮೂಲಸೌಕರ್ಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಕಾನೂನು ಬಾಹಿರ ಕೃತ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

— ಇ ಕೆ.ಮುಹಮ್ಮದ್, ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net