ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ: ಗೂಗಲ್ ಮ್ಯಾಪ್‌ನಿಂದ ಗೊಂದಲ

  ಕಡಂದಲೆ ಕಡಿದಾದ ಪ್ರದೇಶದಲ್ಲಿ ಗೋಡೆಗೆ ತಾಗಿರುವ ಲಾರಿ.
ಕಡಂದಲೆ ಕಡಿದಾದ ಪ್ರದೇಶದಲ್ಲಿ ಗೋಡೆಗೆ ತಾಗಿರುವ ಲಾರಿ.
Published on
ಬುಧವಾರ ತಡರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿ ಚಾಲಕ ಹೊಸ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ ಕಡಂದಲೆಯ ಕಡಿದಾದ ಇಳಿಜಾರು ಮತ್ತು ಅಪಾಯಕಾರಿ ತಿರುವಿನಲ್ಲಿ ಗೊಂದಲಕ್ಕೆ ಸಿಲುಕಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ರಾಂಗ್ ಸೈಡಿಗೆ ಬಂದು, ಅಲ್ಲಿನ ಗುಡ್ಡದ ಬುಡಕ್ಕೆ ನಿರ್ಮಿಸಲಾಗಿದ್ದ ಗೋಡೆಗೆ ಬಲವಾಗಿ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net