ಡಾ. ಸಾಯಿಗೀತಾ, ವಿದುಷಿ ರಾಜಶ್ರೀ ಉಳ್ಳಾಲ್ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆ

ಡಾ.ಸಾಯಿಗೀತಾ ಹಾಗೂ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆ
ಡಾ.ಸಾಯಿಗೀತಾ ಹಾಗೂ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆ
Published on
ಮಂಗಳೂರು: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಪ್ರತಿವರ್ಷ ನೀಡುವ ವೀರರಾಣಿ ಅಬ್ಬಕ್ಕ ಪ್ರಶಸ್ತಿ-2025-26ನೇ ಸಾಲಿಗೆ ಸಾಹಿತ್ಯದಲ್ಲಿ ಡಾ.ಸಾಯಿಗೀತಾ ಹಾಗೂ ಕಲೆಯಲ್ಲಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಜಯರಾಮ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಲಕಗಳನ್ನು ಹೊಂದಿರುತ್ತದೆ. feb.14ರಂದು ತೊಕ್ಕೊಟ್ಟಿನಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಧಾನ ಮಾಡಲಾಗುತ್ತದೆ. ನಾನಾ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಸಮಿತಿಯ ದಿನಕರ ಉಳ್ಳಾಲ್, ಧನಲಕ್ಷ್ಮಿ ಗಟ್ಟಿ, ಸದಾನಂದ ಬಂಗೇರಾ, ಆನಂದ ಅಸೈಗೋಳಿ, ರತ್ನಾವತಿ ಬೈಕಾಡಿ ಹಾಗೂ ಆಲಿಯಾಬ್ಬ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net