

ಕಾಸರಗೋಡು: ಕಾಞಂಗಾಡು ಸನಿಹದ ಪುಲ್ಲೂರು ಶ್ರೀ ವಿಷ್ಣುಮೂರ್ತಿ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು ಭಂಡಾರವನ್ನು ಒಡೆದು ಅದರೊಳಗಿದ್ದ ಸುಮಾರು 15 ಸಾವಿರ ರೂ. ನಗದು ದೋಚಿದ್ದಾರೆ. ಕ್ಷೇತ್ರದ ಗೇಟಿನ ಬೀಗ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದು, ಈ ಬಗ್ಗೆ ಕ್ಷೇತ್ರದ ಟ್ರಸ್ಟಿ ಬಿ.ಗಂಗಾಧರನ್ ಅಂಬಲತ್ತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.