

ಮೂಡುಬಿದಿರೆ: ನಿಡ್ಡೋಡಿ ಕಲ್ಲಕುಮೇರು ಲವ್ಲಿ ಸ್ಪೋರ್ಟ್ಸ್-ಗೇಮ್ಸ್ ಕ್ಲಬ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾಟ ನಡೆಯಿತು.
ವಿವೇಕಾನಂದ ಮುಂಡಾಜೆ-ಪ್ರಥಮ, ಕ್ರೈಸ್ಟ್ ಕಿಂಗ್ ಕಾರ್ಕಳ ದ್ವಿತೀಯ, ಸೈಂಟ್ ಮೇರಿಸ್ ಕಿನ್ನಿಗೋಳಿ- ತೃತೀಯ, ಮಂಗಳಾ ಉರ್ವಸ್ಟೋರ್-ಚತುರ್ಥ ಸ್ಥಾನ ಪಡೆಯಿತು. ಉತ್ತಮ ಪಾಸರ್: ಸಿಂಚನಾ(ಮುಂಡಾಜೆ), ಉತ್ತಮ ಅಟ್ಯಾಕರ್, ಯಕ್ಷಿತಾ(ಮುಂಡಾಜೆ), ಉತ್ತಮ ಆಲ್ ರೌಂಡರ್: ಶೈನಿ(ಕಾರ್ಕಳ), ಉತ್ತಮ ಲಿಬ್ರೊ: ನಿಶಾ(ಕಾರ್ಕಳ) ವೈಯಕ್ತಿಕ ಪ್ರಶಸ್ತಿ ಪಡೆದರು.
ಕ್ಲಬ್‌ನ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೊಡೆತ್ತೂರು ಗುತ್ತು ನಿತಿನ್ ಕುಮಾರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿದರು. ಶಾಸಕರಾದ ಉಮಾನಾಥ್ ಕೋಟ್ಯಾನ್, ಕರಾಟೆ ಅಕಾಡೆಮಿಯ ಅಧ್ಯಕ್ಷ ಈಶ್ವರ್ ಕಟೀಲ್, ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಂಡ್ಯ, ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಪ್ರೇಮ ಶೆಟ್ಟಿ, ಲಯನ್ಸ್ ಕ್ಲಬ್ ನಿಡ್ಡೋಡಿ-ಕಲ್ಲಮನೂರಿನ ಅಧ್ಯಕ್ಷ ಸಂದೀಪ್ ಸುವರ್ಣ, ಜ್ಞಾನ ರತ್ನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ದೇವಸ್ಯ, ಧೀರೆನ್ ಸುವರ್ಣ ನುಡಿಗತ್ತು, ಗ್ರಾಪಂ ಸದಸ್ಯ ಸಂಜೀವ ಪೂಜಾರಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕ ಸಂಘ ಉಡುಪಿ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಲಾರೆನ್ಸ್ ಡಿಕುನ್ಹಾ ಪೆರ್ಮುದೆ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಉದಯ ಚಂದ್ರ ಉಡುಪ, ಸರ್ವೋದಯ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಸುಕುಮಾರ್ ಅಮೀನ್, ಬಾಪೂಜಿ ಗೇಮ್ಸ್ ಕ್ಲಬ್ ಶುಂಠಿಲಪದವು ಅಧ್ಯಕ್ಷ ಯಶವಂತ ಶೆಟ್ಟಿ, ಲವ್ಲಿ ಸ್ಪೋರ್ಟ್ಸ್-ಗೇಮ್ಸ್ ಕ್ಲಬ್‌ನ ಉಪಾಧ್ಯಕ್ಷ ಜಯ ಪೂಜಾರಿ, ಜಗದೀಶ್ ಕುಲಾಲ್, ರಂಜಿತ್ ಪೂಜಾರಿ, ಕಿರಣ್ ಭಂಡಾರಿ ಉಪಸ್ಥಿತರಿದ್ದರು.