

ಪ್ರಮುಖ ಮುಖ್ಯಾಂಶಗಳು
2019ರಲ್ಲಿ ಗ್ರಾಪಂನ ಕೇಂದ್ರ ಸ್ಥಾನ ಮಾವಿನಕಟ್ಟೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಮಾರುಕಟ್ಟೆ ಕಟ್ಟಡ ಕಾರಣಾಂತರಗಳಿಂದ ಹಳೆಯ ಪಂಚಾಯಿತಿ ಕಟ್ಟಡ ಬಳಿ ನಿರ್ಮಿಸಲಾಗಿತ್ತು. ಉತ್ತಮವಾಗಿ ನಡೆಯುತ್ತಿದ್ದ ಸಂತೆ ಮಾರುಕಟ್ಟೆ ಸರಿಯಾದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದೆ. ಮುಖ್ಯ ರಸ್ತೆಯಿಂದ ತುಂಬಾ ದೂರದಲ್ಲಿರುವ ಹಳೇ ಪಂಚಾಯಿತಿ ಕಟ್ಟಡದ ಬಳಿ ನಿರ್ಮಾಣವಾದ ಹರಾಜುಕಟ್ಟೆ ಬಳಿ ಮನೆಗಳು ಕಡಿಮೆ ಇವೆ. ಮಾವಿನಕಟ್ಟೆ ಬಳಿ ಮಾರುಕಟ್ಟೆ ಇದ್ದರೆ ಗ್ರಾಮಸ್ಥರಿಗೆ, ವ್ಯಾಪಾರಿಗಳಿಗೆ ಇದರ ಪ್ರಯೋಜನ ಸಿಗುತ್ತಿತ್ತು.
ಗ್ರಾಮದ ಅಭಿವೃದ್ಧಿ ಹಿತದೃಷ್ಟಿಯಿಂದ ರೈತರಿಗೆ ಸಹಕಾರಿಯಾಗುವಂತೆ ಪಂಚಾಯಿತಿ ಸೂಚಿಸಿರುವ ನಿವೇಶನದಲ್ಲಿ ಸುಸಜ್ಜಿತವಾದ ಹರಾಜುಕಟ್ಟೆಯನ್ನು ನಿರ್ಮಿಸಿ ಮಣಿನಾಲ್ಕೂರು ಪಂಚಾಯಿತಿಗೆ ಹಸ್ತಾಂತರಿಸಿದ್ದೇವೆ.