_1763636187720.webp?w=480&auto=format%2Ccompress&fit=max)
_1763636187720.webp?w=480&auto=format%2Ccompress&fit=max)
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ 93ನೇ ವರ್ಷದ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿ ಗಣ್ಯರನ್ನು ಅಮೃತ ವರ್ಷಿಣಿ ಸಭಾಭವನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಮ್ಮೇಳನ ಉದ್ಘಾಟಕ ಸಾಹಿತಿ ಪ್ರೊ.ಪ್ರೇಮಶೇಖರ, ಪತ್ರಕರ್ತ ವಿಶ್ವೇಶ್ವರ ಭಟ್, ಉಪನ್ಯಾಸಕರಾದ ಶಾಂತಾ ನಾಗಮಂಗಲ, ಡಾ.ರು ವಿ., ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ.ಶ್ರೇಯಸ್ ಕುಮಾರ್, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿ ಮತ್ತು ಕೃಷ್ಣ ಸಿಂಗ್, ದೇಗುಲದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಮೊದಲಾದವರಿದ್ದರು.
ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರನ್ನು ಕ್ಷೇತ್ರದ ಆನೆಗಳು, ಚೆಂಡೆ, ಸೆಟ್, ವಾದ್ಯವೃಂದ, ಹಕ್ಕಿ ನಿಶಾನೆ ಇತ್ಯಾದಿ ಮೆರವಣಿಗೆ ಮೂಲಕ ಸಭಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.