ಬೆಳ್ತಂಗಡಿಯ ಕಲ್ಮಂಜದ ನಿವಾಸಿ, ಉಜಿರೆಯ ಪತ್ರಿಕಾ ವಿತಕ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಮಕ್ಕಳಾದ ಧರಿತ್ರಿ ಭಿಡೆ, ಎಸ್.ಡಿ.ಎಂ.ಡಿಗ್ರಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಭರತನಾಟ್ಯ ವಿದ್ವತ್ಪೂರ್ವ ಹಂತದ ಪರೀಕ್ಷೆಯನ್ನು ( ಭರತನಾಟ್ಯ ಪ್ರೌಢ) ಬೆಂಗಳೂರಿನ ಎಸ್- ವ್ಯಾಸ ವಿಶ್ವವಿದ್ಯಾಲಯದ ಎಸ್- ಸೊಸೈಟಿಯ ಸ್ಪೆಕ್ ಪರೀಕ್ಷೆಯ ಮೂಲಕ ಪ್ರಥಮ ರ‌್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಹಂಸಿನಿ ಭಿಡೆ, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗ ವಿದ್ಯಾರ್ಥಿನಿಯಾಗಿದ್ದು ಕೆ.ಎಸ್.ಇ.ಬಿ ನಡೆಸಿದ್ದ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.